Breaking News

ಮೊಬೈಲ್‌ ವ್ಯಾಲೆಟ್‌ ಮಿತಿ 2 ಲಕ್ಷ ರೂ.ಗೆ : ಆರ್‌ಬಿಐ ಆದೇಶ

Spread the love

ಹೊಸದಿಲ್ಲಿ : ಮೊಬೈಲ್‌ ವ್ಯಾಲೆಟ್‌ ಬಳಕೆದಾರರಿಗೆ ಆರ್‌ಬಿಐ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ನೀವು ವ್ಯಾಲೆಟ್‌ನಲ್ಲಿ 2 ಲಕ್ಷ ರೂ.ವರೆಗೆ ಇಟ್ಟುಕೊಳ್ಳಬಹುದು. ವ್ಯಾಲೆಟ್‌ನಲ್ಲಿ ಇಡ ಬಹುದಾದ ಮೊತ್ತದ ಮಿತಿಯನ್ನು 1 ಲಕ್ಷ ರೂ.ನಿಂದ 2 ಲಕ್ಷ ರೂ.ಗಳಿಗೆ ಏರಿಸಿ ಆರ್‌ಬಿಐ ಬುಧವಾರ ಆದೇಶ ಹೊರಡಿಸಿದೆ.

ಅಲ್ಲದೆ ಪೇಟಿಎಂ, ಫೋನ್‌ಪೇ, ಮೊಬಿವಿಕ್‌, ಗೂಗಲ್‌ಪೇ ಸೇರಿದಂತೆ ಪ್ರೀಪೇಯ್ಡ ಮೊಬೈಲ್‌ ವ್ಯಾಲೆಟ್‌ ಕಂಪೆನಿಗಳು ಕೂಡ ಶೀಘ್ರದಲ್ಲೇ ಸಂಪೂರ್ಣ ಕೆವೈಸಿ (ನೋ ಯುವರ್‌ ಕಸ್ಟಮರ್‌) ಪ್ರಕ್ರಿಯೆಯನ್ನು ಜಾರಿ ಮಾಡಬೇಕು ಎಂದೂ ಸೂಚಿಸಿದೆ.

ತಮ್ಮ ಗ್ರಾಹಕರನ್ನು ಗುರುತಿಸಲು ಮತ್ತು ದೃಢೀಕರಿಸಲು ಮೊಬೈಲ್‌ ಕಂಪೆನಿಗಳು ಹಾಗೂ ಹಣಕಾಸು ಸೇವಾ ಕಂಪೆನಿಗಳೂ ಕೆವೈಸಿ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಅನುಸರಿಸಬೇಕು. ಖಾತೆ ತೆರೆಯುವಾಗ ಮಾತ್ರವಲ್ಲದೆ ನಿಯಮಿತವಾಗಿ ಈ ಪ್ರಕ್ರಿಯೆಯನ್ನು ಮಾಡುತ್ತಿರಬೇಕು. ಈ ಕುರಿತ ವಿಸ್ತೃತ ಸೂಚನೆಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ.

ವ್ಯಾಲೆಟ್‌ನಿಂದ ವ್ಯಾಲೆಟ್‌ಗೆ ಹಣ
ಆರ್‌ಬಿಐಯ ಪ್ರಸ್ತಾವಕ್ಕೆ ಒಪ್ಪಿಗೆ ಸಿಕ್ಕಿದರೆ, ಶೀಘ್ರದಲ್ಲೇ ನೀವು ಒಂದು ಡಿಜಿಟಲ್‌ ವ್ಯಾಲೆಟ್‌ನಿಂದ ಮತ್ತೂಂದು ವ್ಯಾಲೆಟ್‌ಗೆ
ಹಣವನ್ನು ವರ್ಗಾಯಿಸಲೂ ಸಾಧ್ಯ. ಇನ್ನು ಮುಂದೆ ಭಿನ್ನ ವ್ಯಾಲೆಟ್‌ಗಳಿಗೂ ಹಣವನ್ನು ಕಳುಹಿಸಬಹುದು. ಅಂದರೆ ಪೇಟಿಎಂ ಬಳಕೆದಾರ ಫೋನ್‌ಪೇ ಬಳಕೆದಾರನ ವ್ಯಾಲೆಟ್‌ಗೂ ಹಣ ವರ್ಗಾಯಿಸಬಹುದು.


Spread the love

About Laxminews 24x7

Check Also

ಇಲ್ಲಿನ ಇನ್ಫೋಸಿಸ್ ಕ್ಯಾಂಪಸ್​ನಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರೆದಿದ್ದು,

Spread the loveಮೈಸೂರು: ಇಲ್ಲಿನ ಇನ್ಫೋಸಿಸ್ ಕ್ಯಾಂಪಸ್​ನಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರೆದಿದ್ದು, ಸುರಕ್ಷತಾ ಕ್ರಮವಾಗಿ ಕಂಪನಿಯ ಟ್ರೈನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ