Breaking News

ಎಸಿಬಿ ದಾಳಿಗೆ ಹೆದರಿ 5 ಲಕ್ಷ ರೂ ನಗದನ್ನು ಸುಡಲು ಪ್ರಯತ್ನಿಸಿದ ಅಧಿಕಾರಿ

Spread the love

ತೆಲಂಗಾಣ : ಎಸಿಬಿ ದಾಳಿಗೆ ಹೆದರಿ ಅಧಿಕಾರಿಯ ಸಹಚರನೊಬ್ಬ ಒಂದು ಅಜಾಗರೂಕತೆಯ ಹಾಗೂ ಹಾಸ್ಯಾಸ್ಪದ ವಾದಂತಹ ಘಟನೆಗೆ ಎಡೆಮಾಡಿಕೊಟ್ಟಿದ್ದರೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಎಬಿಸಿ ಅಧಿಕಾರಿಗಳ ದಾಳಿಗೆ ಹೆದರಿ 5 ಲಕ್ಷ ರೂ . ನಗದು ಸುಟ್ಟು ಹಾಕುವ ಯತ್ನ ನಡೆದಿದೆ .

ನೋಟು ಸುಡುತ್ತಿರುವ ಸಂದರ್ಭದಲ್ಲಿ, ಎಸಿಬಿ ಅಧಿಕಾರಿಗಳು ಬಲವಂತವಾಗಿ ಬಾಗಿಲು ತೆಗೆದಾಗ ನೋಟುಗಳು ಶೇ .70 ರಷ್ಟು ಸುಟ್ಟು ಬಸ್ಮಾ ಬಾಗಿರುವುದು ಕಂಡುಬಂದಿದ್ದು, ಅಧಿಕಾರಿಗಳು ಆ ಸುಟ್ಟ ನೋಟುಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ .

ಇದರ ವಿಚಾರಣೆಯ ವೇಳೆ ಸತ್ಯಸಂಗತಿಗಳು ಹೊರಬಿದ್ದಿದ್ದು, ರಂಗಾರೆಡ್ಡಿ ಜಿಲ್ಲೆಯ ತಲಕೊಂಡಪಲ್ಲಿ ಮಂಡಲದ ಕೊರೆಂಟಕುಂಟ್ ಸರ್ಪಂಚ್ ರಾಮುಲು ಅವರು ಬೊಲಾಂಪಲ್ಲಿ ಎಂಬಲ್ಲಿ ಗಣಿಗಾರಿಕೆ ನಡೆಸಲು ಅರ್ಜಿ ಸಲ್ಲಿಸಿದ್ದರು . ಈ ಸಂಬಂಧ ವೆಲ್ಕಂಡ ತಹಸೀಲ್ದಾರ್‌ ಅವರಿಗೆ ಪರವಾನಗಿ ನೀಡುವಂತೆ ಮತ್ತು ಸರ್ವೆ ಮಾಡುವಂತೆ ಮನವಿ ಮಾಡಿದ್ದರು . ಆದರೆ ತಹಸೀಲ್ದಾರ್‌ , ವೆಂಕಟಯ್ಯ ಗೌಡ್ ಅವರ ನಿವಾಸದಲ್ಲಿ ಮೀಟಿಂಗ್ ಮಾಡುವಂತೆ ಸಲಹೆ ನೀಡಿದ್ದರು . ಈ ವೇಳೆ , ವೆಂಕಟಯ್ಯ ಗೌಡ್ 6 ಲಕ್ಷ ರೂ . ಲಂಚದ ಬೇಡಿಕೆಯಿಟ್ಟಿದ್ದರು . ಅಂತಿಮವಾಗಿ ಇಬ್ಬರ ನಡುವೆ ಐದು ಲಕ್ಷ ರೂ.ಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ತಿಳಿದುಬಂದಿದೆ.

ಈ ಬಗ್ಗೆ ಸರ್ಪಂಚ್ ರಾಮುಲು ಎಸಿಬಿ ಅಧಿಕಾರಿಗಳನ್ನು ಭೇಟಿ ಮಾಡಿ ವಿಷಯ ಮುಟ್ಟಿಸಿದ್ದರು . ರಾಮುಲು ವೆಂಕಟಯ್ಯ ಅವರ ಮನೆಗೆ ತೆರಳಿ ಹಣ ನೀಡಿದ್ದರು . ಈ ವೇಳೆ ವೆಂಕಟಯ್ಯ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು . ವಿಷಯ ಗೊತ್ತಾಗುತ್ತಿದ್ದಂತೆ ವೆಂಕಟಯ್ಯ , ರಾಮುಲು ನೀಡಿದ್ದ ಐದು ಲಕ್ಷ ರೂ . ನಗದನ್ನು ಗ್ಯಾಸ್ ಸ್ಟವ್ ಮೇಲಿರಿಸಿ ಸುಟ್ಟು ಹಾಕುವ ಯತ್ನ ಮಾಡಿದ್ದಾರೆ . ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ತಹಸೀಲ್ದಾರ್‌ ಸೈದುಲು ಅವರ ಎಲ್.ಬಿ. ನಗರ ನಿವಾಸದ ಮೇಲೂ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.


Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ