Breaking News

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ, ವಕೀಲ ಶ್ಯಾಮ್‌ಸುಂದರ್ ಮಹತ್ವದ ಹೇಳಿಕೆ

Spread the love

ಬೆಂಗಳೂರು, ಮಾರ್ಚ್ 29: ಸಂತ್ರಸ್ತೆಯು ನೇರವಾಗಿ ನ್ಯಾಯಾಧೀಶರ ಮುಂದೆ ಬಂದು ಹೇಳಿಕೆ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ರಮೇಶ್ ಜಾರಕಿಹೊಳಿ ಪರ ವಕೀಲ ಶ್ಯಾಮ್ ಸುಂದರ್ ಪ್ರತಿಪಾದಿಸಿದ್ದಾರೆ.

ಪೊಲೀಸರ ವಿಚಾರಣೆ ಬಳಿಕ ಮುಂದೆ ಸಂತ್ರಸ್ತೆ ಎಂದು ಹೇಳಿಕೊಂಡಿರುವ ಯುವತಿ ನ್ಯಾಯಾಧೀಶರ ಮುಂದೆ ಸಿಆರ್‌ಪಿಸಿ 164ರ ಪ್ರಕಾರ ಹೇಳಿಕೆ ದಾಖಲಿಸಬಹುದು ಆದರೆ, ಪೊಲೀಸರ ಮುಂದೆ ಹಾಜರಾಗದೆಯೇ ಈ ರೀತಿ ನೇರವಾಗಿ ಕೋರ್ಟ್ ಮುಂದೆ ಹೇಳಿಕೆ ನೀಡಲು ಸಾಧ್ಯವಿಲ್ಲ.

 

ಹೀಗೆ ಮುಂದೆ ಪ್ರತಿಯೊಬ್ಬ ದೂರುದಾರರು ನೇರವಾಗಿ ಕೋರ್ಟ್ ಮುಂದೆ ಬಂದು ಹೇಳಿಕೆ ನೀಡಲು ಆರಂಭಿಸಿದರೆ ಕಾನೂನು ಪ್ರಕ್ರಿಯೆಗಳೇ ಬದಲಾಗಬಹುದು ಇದು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟರು.

ರಮೇಶ್ ಜಾರಕಿಹೊಳಿಯ ಅವರ ವಿಚಾರಣೆ ನಡೆಯುತ್ತಿದೆ ಎಂದು ನಾನು ಬಂದಿಲ್ಲ, ವಿಚಾರಣೆ ಅದರಷ್ಟೆಕ್ಕೆ ನಡೆಯಲಿದೆ ಆದರೆ ಒಂದು ವಿಚಾರಣೆ ನಡೆಯುವಾಗ ವಕೀಲರಿರುವುದು ಸ್ವಾಭಾವಿಕ ಅದಕ್ಕೆ ನಾನು ಇಲ್ಲಿ ಆಗಮಿಸಿದ್ದೇನೆ ಎಂದರು.

ಇನ್ನೂ ವಿಚಾರಣೆ ಪೂರ್ಣಗೊಂಡಿಲ್ಲ, ಸಾಕಷ್ಟು ಸಮಯ ಹಿಡಿಯುತ್ತದೆ. ದೂರುದಾರರು ಪೊಲೀಸರ ಮೂಲಕವೇ ಕೋರ್ಟ್‌ಗೆ ಬರಬೇಕು, ಇದು ಸರಿಯಾದ ಮಾರ್ಗವಲ್ಲ. ಆಕೆ ಏನು ಕೆಲಸ ಮಾಡುತ್ತಿದ್ದರು ಎನ್ನುವುದು ಅವರ ಪೋಷಕರಿಗೆ ತಿಳಿದಿದೆ ನನಗೆ ಮಾಹಿತಿ ಇಲ್ಲ ಎಂದರು.

 

 

ಯುವತಿ ಪೊಲೀಸರ ಮುಂದೆ ಹಾಜರಾಗದೆ ನೇರವಾಗಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಇ ಮೇಲ್ ಕಳುಹಿಸಿದ್ದಾಳೆ, ಬಳಿಕ ತಂದೆ ತಾಯಿಗೆ ರಕ್ಷಣೆ ನೀಡುವಂತೆ ಕೂಡ ಕೇಳಿಕೊಂಡಿದ್ದಾಳೆ.


Spread the love

About Laxminews 24x7

Check Also

ಟ್ರೆಂಡ್‌ ಗೀಳಿಗೆ ಬಿದ್ದು ಟ್ರ್ಯಾಪ್‌ ಆಗ್ಬೇಡಿ – 80s ಫೋಟೊ ಟ್ರೆಂಡ್‌ ಬಗ್ಗೆ ಪೊಲೀಸರ ಎಚ್ಚರಿಕೆ!

Spread the loveನೆಲಮಂಗಲ: ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಟ್ರೆಂಡ್ ಆಗುತ್ತಿರುವ 80ರ ದಶಕದ ಫೋಟೋ ಎಡಿಟಿಂಗ್ ಕುರಿತು ಸಾರ್ವಜನಿಕರು ಎಚ್ಚರಿಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ