Breaking News
Home / ರಾಜಕೀಯ / ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಇನ್ಮುಂದೆ ವಾಹನಗಳ ಆರ್​ಸಿ ರಿನ್ಯೂ ಮಾಡಲು ಕಟ್ಟಬೇಕು 8 ಪಟ್ಟು ಹೆಚ್ಚು ಹಣ..!

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಇನ್ಮುಂದೆ ವಾಹನಗಳ ಆರ್​ಸಿ ರಿನ್ಯೂ ಮಾಡಲು ಕಟ್ಟಬೇಕು 8 ಪಟ್ಟು ಹೆಚ್ಚು ಹಣ..!

Spread the love

ಕೇಂದ್ರ ಸಾರಿಗೆ ಸಚಿವಾಲಯ ಒಂದು ಡ್ರಾಫ್ಟ್​ ನೋಟಿಫಿಕೇಶನ್​ ಜಾರಿ ಮಾಡಿದೆ. ಇದರನ್ವಯ ಹಳೆಯ ವಾಹನಗಳ ಸಂಬಂಧ ಕೆಲ ಶುಲ್ಕಗಳನ್ನ ಹೆಚ್ಚಿಸಿದೆ. ಕೇಂದ್ರ ಸರ್ಕಾರದ ವಾಹನ ಸ್ಕ್ರಾಪೇಜ್​ ಪಾಲಿಸಿಯಡಿಯಲ್ಲಿ ಈ ಮಹತ್ವದ ಹೆಜ್ಜೆಯನ್ನ ಕೈಗೊಳ್ಳಲು ಸಚಿವಾಲಯ ಪ್ಲಾನ್​ ಮಾಡಿದೆ.

ಇದರ ಅಡಿಯಲ್ಲಿ ನಿಮ್ಮ ಬಳಿ 15 ವರ್ಷಕ್ಕೂ ಹಳೆಯ ಗಾಡಿ ಇದೆ ಅಂದಾದರೆ ಅದರ ರಿಜಿಸ್ಟ್ರೇಷನ್​ ಸರ್ಟಿಫಿಕೇಟ್​​ ಅಥವಾ ಆರ್​ಸಿ ರಿನ್ಯೂ ಮಾಡಲು ನೀವು 5 ಸಾವಿರ ರೂಪಾಯಿವರೆಗೆ ಪಾವತಿ ಮಾಡಬೇಕಾಗಿ ಬರುತ್ತೆ..!

ಅಂದರೆ ಈ ಅಕ್ಟೋಬರ್​ನ ಬಳಿಕ ನಿಮ್ಮ ಆರ್​ಸಿ ರಿನ್ಯೂ ಮಾಡಲು ನೀವು 8 ಪಟ್ಟು ಹೆಚ್ಚು ಹಣ ಪಾವತಿ ಮಾಡಬೇಕಾಗಿ ಬರಬಹುದು. ಇದನ್ನ ಹೊರತುಪಡಿಸಿ ಹಳೆಯ ಬೈಕ್​​ನ ರಿಜಿಸ್ಟ್ರೇಷನ್​ಗಾಗಿ 300 ರೂಪಾಯಿ ಬದಲು ಇನ್ಮೇಲೆ 1000 ರೂಪಾಯಿವರೆಗೆ ಪಾವತಿ ಮಾಡಬೇಕು. ಅದೇ 15 ವರ್ಷ ಹಳೆಯ ಬಸ್ ಹಾಗೂ ಟ್ರಕ್​​ಗಳ ಫಿಟ್​ನೆಸ್​ ರಿನ್ಯೂವಲ್​​ ಸರ್ಟಿಫಿಕೇಟ್​​​ಗಳಿಗೆ ಹಳೆಯ ಮೊತ್ತಕ್ಕಿಂತ 21 ಪಟ್ಟು ಹೆಚ್ಚು ಅಂದರೆ ಬರೋಬ್ಬರಿ 12,500 ರೂಪಾಯಿ ಪಾವತಿ ಮಾಡಬೇಕು.

ಈ ಪ್ರಸ್ತಾವನೆಯ ಪ್ರಕಾರ ವೈಯಕ್ತಿಕ ವಾಹನಗಳ ನೊಂದಣಿ ರಿನ್ಯೂ ಮಾಡಿಸಲು ವಿಳಂಬ ಮಾಡಿದ್ದಲ್ಲಿ ಪ್ರತಿ ತಿಂಗಳಿಗೆ 300 – 500 ರೂಪಾಯಿ ದಂಡದ ರೂಪದಲ್ಲಿ ಪಾವತಿ ಮಾಡಬೇಕು. ಇದು ಮಾತ್ರವಲ್ಲದೇ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವ ವಾಹನಗಳನ್ನ ರಿನ್ಯೂ ಮಾಡಲು ವಿಳಂಬ ಮಾಡಿದ್ರೆ ಪ್ರತಿ ದಿನಕ್ಕೆ 50 ರೂಪಾಯಿಯಂತೆ ದಂಡ ಪಾವತಿಸಬೇಕು.

ಖಾಸಗಿ ವಾಹನಗಳ ಮಾಲೀಕರು ವಾಹನಕ್ಕೆ 15 ವರ್ಷ ಆದ ಬಳಿಕ ಪ್ರತಿ 5 ವರ್ಷಗಳಿಗೊಮ್ಮೆ ಫಿಟ್​ನೆಸ್​ ಪರೀಕ್ಷೆಯನ್ನ ಮಾಡಿಸಲೇಬೇಕು. ಅದೇ ರೀತಿ ವಾಣಿಜ್ಯ ವಾಹನಗಳು ಪ್ರತಿ 8 ವರ್ಷಗಳಿಗೊಮ್ಮೆ ರಿಜಿಸ್ಟ್ರೇಷನ್​ ಸರ್ಟಿಫಿಕೇಟ್​ ರಿನ್ಯೂ ಮಾಡಿಬೇಕು. ಒಂದು ವೇಳೆ ನಿಮ್ಮ ವಾಹನ ಫಿಟ್​ನೆಸ್​ ಪರೀಕ್ಷೆಯಲ್ಲಿ ಅನುತ್ತೀರ್ಣವಾಯ್ತು ಅಂದರೆ ಆ ವಾಹನ ನೇರವಾಗಿ ಗುಜರಿ ಸೇರಲಿದೆ. ಈ ಎಲ್ಲಾ ನಿಯಮಗಳನ್ನ ಜಾರಿಗೆ ತರುವ ಸಲುವಾಗಿ ಕೇಂದ್ರ ಸಾರಿಗೆ ಸಚಿವಾಲಯ ಈ ಡ್ರಾಫ್ಟ್​ ನೋಟಿಫಿಕೇಶನ್​ನ್ನು ತಯಾರಿಸಿದೆ.


Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ