Breaking News

ಗಮನ ಸೆಳೆದ ಬನಶಂಕರಿ ದೇವಿಯ ತರಕಾರಿ ಪೂಜೆ

Spread the love

ರಬಕವಿ-ಬನಹಟ್ಟಿ: ಬಾಗಲಕೋಟ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಹಳೆಯ ನೀರಿನ ಟ್ಯಾಂಕ್ ಹತ್ತಿರ ಇರುವ ಬನಶಂಕರಿ ದೇವಸ್ಥಾನದ ಜಾತ್ರೆಯ ನಿಮಿತ್ತವಾಗಿ ಬನಶಂಕರಿ ದೇವಿಗೆ ಶುಕ್ರವಾರ 108 ತರಕಾರಿ ಮತ್ತು ವಿವಿಧ ರೀತಿಯ ಹಣ್ಣು ಹಂಪಲುಗಳಿಂದ ಶೃಂಗಾರದ ಪೂಜೆಯನ್ನು ಕೈಗೊಳ್ಳಲಾಯಿತು.

ತರಕಾರಿಗಳಿಂದ ಮಾಡಲಾದ ಶೃಂಗಾರದ ಪೂಜೆ ಭಕ್ತರ ಗಮನ ಸೆಳೆಯಿತು. ಅರ್ಚಕರಾದ ಬಸಪ್ಪ ಮಂಡಿ ಹಾಗೂ ಸಂಗಪ್ಪ ಕೊಳ್ಳಿ, ಬಸು ನುಚ್ಚಿ, ರಾಜು ಶೀಲವಂತ, ಕಾಡು ಬಬಲಾದಿ ಮಧ್ಯ ರಾತ್ರಿಯಿಂದ ತರಕಾರಿ ಶೃಂಗಾರವನ್ನು ಕೈಗೊಂಡರು.

ಈ ಸಂದರ್ಭದಲ್ಲಿ ಚಿಕ್ಕಪ್ಪ ಮುಗತಿ, ಕಾಡಪ್ಪ ಪಾಟೀಲ, ಈಶ್ವರಪ್ಪ ಕೆರೂರ, ಕಾಡಪ್ಪ ಸಜ್ಜಿ, ಶೇಖರ ಶೀಲವಂತ, ಶಿವಪ್ಪ ಮನವಾಡೆ ಸೇರಿದಂತೆ ಅನೇಕರು ಇದ್ದರು.

ಇಂದು ರಾತ್ರಿ 8ಕ್ಕೆ ಜಾತ್ರೆಯ ನಿಮಿತ್ತವಾಗಿ ರಥೋತ್ಸವ ನಡೆಯಲಿದೆ. ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಪಲ್ಲಕ್ಕಿ ಉತ್ಸವ, ಕುಂಭ ಮೇಳ, ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ