Breaking News

391ನೇ ಛತ್ರಪತಿ ಶಿವಾಜಿ ಜಯಂತಿ ಶುಭ ಕೋರಿದ ಸಂತೋಷ್ ಜಾರಕಿಹೊಳಿ

Spread the love

ಇಂದು ಮರಾಠ ಸಾಮ್ರಾಟ ಛತ್ರಪತಿ ಶಿವಾಜಿಯವರ 391ನೇ ಜಯಂತೋತ್ಸವ. ಭಾರತ ದೇಶ ಕಂಡ ವೀರಾಧಿವೀರರಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಕೂಡ ಒಬ್ಬರು. ಜೀಜಾಬಾಯಿ ಅವರ ಪ್ರೇರಣಾತ್ಮಕ ಮಾತುಗಳಿಂದಲೇ ಶಿವಾಜಿ ಬಾಲ್ಯದಲ್ಲೇ ಮರಾಠ ಸಾಮ್ರಾಜ್ಯದ ಕನಸನ್ನು ಕಂಡವರು.

ಶಿವಾಜಿ, ಮರಾಠ ಸಾಮ್ರಾಜ್ಯಕ್ಕಿಂತ ಹೆಚ್ಚಾಗಿ ಹಿಂದೂಗಳ ಸಾಮ್ರಾಜ್ಯ ಕಟ್ಟಿದರು ಎಂದು ಕೆಲ ಇತಿಹಾಸಕಾರರು ಹೇಳುತ್ತಾರೆ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಶಿವಾಜಿಯವರ ಸಾಹಸಗಾಥೆ ಒಂದು ಪ್ರೇರಣೆ ಎನ್ನುವ ದೃಷ್ಟಿಯಲ್ಲಿ ಭಾರತದ ಸಹಸ್ರ ಸಹಸ್ರ ಮಂದಿ ಶಿವಾಜಿಯನ್ನು ಅನುಸರಿಸುವವರಿದ್ದಾರೆ.

ಇಡೀ ದೇಶದಾದ್ಯಂತ ಇಂದು ಶಿವಾಜಿ ಮಹಾರಾಜ್ ಅವರ 391ನೇ ಜಯಂತಿಯನ್ನು ಆಚರಿಸಲಾಗುತ್ತಿದೆ. ಇನ್ನು, ಮಹಾರಾಷ್ಟ್ರ ಸರ್ಕಾರ ಈ ದಿನವನ್ನು ಶಿವಾಜಿಯವರಿಗೆ ಸಲ್ಲಿಸುವ ಗೌರವಾರ್ಥವಾಗಿ ಸರ್ಕಾರಿ ರಜಾ ದಿನವೆಂದು ಘೋಷಿಸಿದೆ.

ಈ ಶುಭ ಸಂದರ್ಭದಲ್ಲಿ ಶುಭ ಹಾರೈಸಿದ್ದಾರೆ ಸಂತೋಷ್ ಜಾರಕಿಹೊಳಿ.


Spread the love

About Laxminews 24x7

Check Also

ವಸ್ತುಗಳನ್ನು ಸಾಗಿಸುತ್ತಿದ್ದಾಗ ಏಕಾಏಕಿ ಕುಸಿದ ಲಿಫ್ಟ್‌ – ಇನ್‌ಸ್ಟಾ ಮಾರ್ಟ್‌ ಉದ್ಯೋಗಿ ಸಾವು

Spread the loveಮಂಗಳೂರು: ವಸ್ತುಗಳನ್ನು ಸಾಗಿಸುತ್ತಿದ್ದಾಗ ಏಕಾಏಕಿ ಲಿಫ್ಟ್‌ ಕುಸಿದು ಇನ್‌ಸ್ಟಾ ಮಾರ್ಟ್‌ ಉದ್ಯೋಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ  ಕುಂಟಿಕಾನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ