ದಿನಾಂಕ 18, ರಂದು ಬೆಳಗಾವಿಯ ರೈಲು ನಿಲ್ದಾಣದಲ್ಲಿ “ರೈಲು ತಡೆ ಚಳುವಳಿ”
ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೃಷಿ ಕರಾಳ ಕಾನೂನು ವಿರೋಧಿಸಿ ದೆಹಲಿಯಲ್ಲಿ 90 ದಿನಗಳಿಂದ ಹಮ್ಮಿಕೊಂಡ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವುದು ಮತ್ತು ಕೃಷಿ ಕಾನೂನುಗಳನ್ನು ಹಿಂಪಡೆಯಲು ಆಗ್ರಹಿಸಲು ದೆಹಲಿಯ ಸಂಯುಕ್ತ ಕಿಸಾನ ಮೋರ್ಚಾ ಕರೆ ಮೆರೆಗೆ ದಿನಾಂಕ 18_2_2021 ಗುರುವಾರ ಮಧ್ಯಾಹ್ನ 12 ರಿಂದ 2 ರ ವರೆಗೆ ಬೆಳಗಾವಿಯ ರೈಲು ನಿಲ್ದಾಣದಲ್ಲಿ ಭಾರತೀಯ ಕೃಷಿಕ ಸಮಾಜ (ಸಂ) ರೈತ ಸಂಘಟನೆ ಹಾಗು ವಿವಿಧ ಹೋರಾಟ ಸಂಘಟನೆ ಗಳ ನೇತೃತ್ವದಲ್ಲಿ “ರೈಲು ತಡೆ ಚಳುವಳಿ ” ಹಮ್ಮಿಕೊಳ್ಳಲಾಗಿದೆ.ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ರೈತರು,ಕಾರ್ಮಿಕರು,ಯುವಜನರು, ವಿದ್ಯಾರ್ಥಿಗಳು, ದಲಿತರು, ಮಹಿಳಾ ಸಂಘಟನೆ ಗಳು,ಹಾಗು ಸಮನ್ವಯ ಸಂಘಟನೆಗಳು ಸಮಯಕ್ಕೆಸರಿಯಾಗಿ ಭಾಗವಹಿಸಲು ಈ ಮೂಲಕ ಕೋರಲಾಗಿದೆ.
ವಿಶೇಷವಾಗಿ ರೈತರ ಮಹತ್ವಾಕಾಂಕ್ಷಿ ಹೋರಾಟಕ್ಕೆ ಸಾರ್ವಜನಿಕರು,ಪ್ರಯಾಣಿಕರು ಸಹಕರಿಸಲು ಕೋರಲಾಗಿದೆ
Laxmi News 24×7