Breaking News

ಉಮೇಶ ಕತ್ತಿಗೆ ಕ್ಲಾಸ್ ತೆಗೆದುಕೊಂಡ ಸಿಎಂ B.S.Y….!!!

Spread the love

ಬೆಂಗಳೂರು : ನಾಗರಿಕ ಪೂರೈಕೆ ಇಲಾಖೆ ಸಚಿವ ಉಮೇಶ ಕತ್ತಿ ಹೇಳಿಕೆಗೆ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕ್ಲಾಸ್ ತೆಗೆದುಕೊಂಡಿದ್ದು ಇದರಿಂದ ಕತ್ತಿ ಗರಂ ಆಗಿದ್ದಾರೆ.

ಟಿವಿ , ಪ್ರೀಡ್ಜ್, ಬೈಕ್ ಇದ್ದರೆ ಬಿಪಿಎಲ್ ಪಡಿತರ ಕಾರ್ಡ್ ರದ್ದುಗೊಳಿಸಲಾಗುತ್ತದೆ ಎಂಬ ಸಚಿವ ಉಮೇಶ ಕತ್ತಿ ಹೇಳಿಕೆಗೆ ವಿಪಕ್ಷ ಹಾಗೂ ಸ್ವಪಕ್ಷಿಯದಲ್ಲಿ ಮತ್ತು ರಾಜ್ಯದ ಜನರು ವಿರೋಧ ವ್ಯಕ್ತ ಪಡಿಸಿದ್ದರು. ಇದರಿಂದ ಸಚಿವರ ನಿರ್ಧಾರದಿಂದ ಸರ್ಕಾರಕ್ಕೆ ಕಪ್ಪು ಚುಕ್ಕೆಯಾಗಲಿದೆ ಎಂದು ಸಚಿವ ಉಮೇಶ ಕತ್ತಿಗೆ ಸಿಎಂ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಪಕ್ಷದಲ್ಲಿ ತಮ್ಮ ಹೇಳಿಕೆಗೆ ವಿರೋಧ ಹಾಗೂ ಸಿಎಂ ಕ್ಲಾಸ್ ತೆಗೆದುಕೊಂಡಿರುವುದರಿಂದ ಉಮೇಶ್ ಕತ್ತಿ ಫುಲ್ ಗರಂ ಆಗಿದ್ದಾರೆ. ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವನಾಥ್ ಸಕ್ಕರೆ ಕಾರ್ಖಾನೆಗೆ ಇಂದ ಆಗಮಿಸಿದ ವೇಳೆ ತಮ್ಮ ಹೇಳಿಕೆಗೆ ಕುರಿತು ಪ್ರಶ್ನಿಸಿದಾಗ, ಮಾಧ್ಯಮದವರ ಮೇಲೆ ಸಿಟ್ಟಾಗುವ ಮೂಲಕ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.

ಮೈಕ್ ತೆಗೆಯುತ್ತಿರೋ ಇಲ್ಲವೋ,,,ತಗಿರೋ ಎಂದು ಮಾಧ್ಯಮ ಪ್ರತಿನಿಧಿಗಳ ಮೇಲೆ ಗದರಿಸಿದ್ದಾರೆ.


Spread the love

About Laxminews 24x7

Check Also

ಎತ್ತಿನಭುಜ ಟ್ರೆಕ್ಕಿಂಗ್‌ ರೀ ಓಪನ್ – ರಸ್ತೆ ಮೇಲೆ ಬಿದ್ದ ರಾಶಿ ರಾಶಿ ಮರಗಳಿಂದ ಪ್ರವಾಸಿಗರ ಪರದಾಟ

Spread the loveಚಿಕ್ಕಮಗಳೂರು: ಹಲವು ತಿಂಗಳುಗಳಿಂದ ನಿಲ್ಲಿಸಿದ್ದ ಎತ್ತಿನಭುಜ ಟ್ರೆಕ್ಕಿಂಗ್‌ಗೆ  ರೀ ಓಪನ್ ಆಗಿದೆ. ಹಲವು ತಿಂಗಳಿಂದ ಟ್ರಕ್ಕಿಂಗ್‌ ಬಂದ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ