ಚೆನ್ನೈ: ನಟ ರಜನಿಕಾಂತ್ ಅಭಿಮಾನಿಗಳ ಸಂಘದ ಸದಸ್ಯರು ಇತರ ಯಾವುದೇ ರಾಜಕೀಯ ಪಕ್ಷಗಳಿಗೆ ಸೇರ್ಪಡೆಗೊಳ್ಳಲು ಮುಕ್ತರಾಗಿದ್ದಾರೆ ಎಂದು ರಜನಿಕಾಂತ್ ಅಭಿಮಾನಿಗಳ ಸಂಘ ಸೋಮವಾರ(ಜನವರಿ 18, 2021) ತಿಳಿಸಿದೆ.
ರಜಿನಿ ಮಕ್ಕಳ್ ಮಂಡ್ರಮ್(ಆರ್ ಎಂಎಂ) ಗೆ ತಮ್ಮ ರಾಜೀನಾಮೆ ಸಲ್ಲಿಸಿದ ನಂತರ ಸದಸ್ಯರು ತಮ್ಮ ಆಯ್ಕೆಯಂತೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಕೊಳ್ಳಬಹುದಾಗಿದೆ ಎಂದು ಸ್ಪಷ್ಟಪಡಿಸಿರುವುದಾಗಿ ವರದಿ ವಿವರಿಸಿದೆ.
ಇತ್ತೀಚೆಗೆ ರಜಿನಿ ಮಕ್ಕಳ್ ಮಂಡ್ರಮ್ ನ ಕೆಲವು ಮುಖಂಡರು ಡಿಎಂಕೆಗೆ ಸೇರ್ಪಡೆಗೊಂಡ ನಂತರ ಈ ಪ್ರಕಟಣೆ ಹೊರಬಿದ್ದಿದೆ. “ಒಂದು ವೇಳೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಂಡರು ಕೂಡಾ ನಮ್ಮ ಸದಸ್ಯರು ಯಾವಾಗಲೂ ನಮ್ಮ ಪ್ರೀತಿಯ ನಾಯಕ, ನಟ ರಜನಿಕಾಂತ್ ಅವರ ಅಭಿಮಾನಿಗಳು ಎಂಬುದನ್ನು ಮನಸ್ಸಿನಲ್ಲಿ ಇರಲಿ ಎಂಬುದಾಗಿ ಆರ್ ಎಂಎಂ ಮುಖಂಡ ವಿಎಂ ಸುಧಾಕರ್ ತಿಳಿಸಿದ್ದಾರೆ.ಆರೋಗ್ಯದ ಹಿನ್ನೆಲೆಯಲ್ಲಿ ರಜನಿಕಾಂತ್ ಅವರು ಬಹು ನಿರೀಕ್ಷೆಯ ರಾಜಕೀಯ ಪಕ್ಷದ ಸ್ಥಾಪನೆ ಬಗ್ಗೆ 2020ರ ಡಿಸೆಂಬರ್ 31ರಂದು ಘೋಷಿಸುವುದಾಗಿ ತಿಳಿಸಿದ್ದು, ನಂತರ ಆ ನಿರ್ಧಾರದಿಂದ ಹಿಂದೆ ಸರಿದಿದ್ದರು.
Laxmi News 24×7