Home / ರಾಜ್ಯ / ಶೂಟಿಂಗ್ ವೇಳೆ ಬಾವಿಗೆ ಬಿದ್ದ ನಮಿತಾ :ಪೋಟೊ ವೈರಲ್

ಶೂಟಿಂಗ್ ವೇಳೆ ಬಾವಿಗೆ ಬಿದ್ದ ನಮಿತಾ :ಪೋಟೊ ವೈರಲ್

Spread the love

ದಕ್ಷಿಣ ಭಾರತದ ಅನೇಕ ಚಿತ್ರಗಳಲ್ಲಿ ನಟಿಸಿದ್ದ ನಟಿ ನಮಿತಾ ಚಿತ್ರರಂಗದಿಂದ ಸ್ವಲ ದಿನಗಳ ಕಾಲ ದೂರವುಳಿದಿದ್ದರು. ಇದೀಗ ಬೌ ಬೌ ಎಂಬ ಚಿತ್ರದಲ್ಲಿ ನಟಿಸುತ್ತಿರುವ ನಮಿತಾ ಶೂಟಿಂಗ್ ವೇಳೆ ಬಾವಿಗೆ ಬಿದ್ದಿದ್ದು, ಈ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಂದಹಾಗೆ ನಮಿತ ನಿಜವಾಗಿಯೂ ಬಾವಿಗೆ ಬಿದ್ದಿರಲಿಲ್ಲ. ಇದು ಬೌ ಬೌ ಚಿತ್ರದ ಒಂದು ದೃಶ್ಯವಷ್ಟೆ.

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ನಟಿ ನಮಿತಾ ಬಾವಿಗೆ ಬಿದ್ದಿದ್ದಾರೆ ಎಂದು ವೈರಲ್ ಆಗಿತ್ತು. ಬೌ ಬೌ ಚಿತ್ರದ ಒಂದು ದೃಶ್ಯದಲ್ಲಿ ನಟಿ ನಮಿತಾ ತನ್ನ ಮೊಬೈಲ್ ಬಾವಿಯಲ್ಲಿ ಬಿದ್ದಿದೆ ಎಂದು ತೆಗೆದುಕೊಳ್ಳಲು ಹೋಗಿ ಬಾವಿಗೆ ನಮಿತಾ ಸಹ ಜಿಗಿಯುತ್ತಾರೆ. ಇದನ್ನು ನೋಡಿ ಅಲ್ಲಿ ನೆರೆದಿದ್ದವರೂ ನಿಜಕ್ಕೂ ನಮಿತಾ ಬಾವಿಗೆ ಬಿದ್ದಿದ್ದಾರೆಂದು ಭಾವಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಈ ಕುರಿತು ಚಿತ್ರದ ನಿರ್ದೇಶಕ ಆರ್.ಎಲ್.ರವಿ ಹೇಳಿದಂತೆ ನಮಿತಾ ರವರು ನೈಜವಾಗಿ ನಟಿಸಿದ್ದಾರೆ.

ಆದ್ದರಿಂದಲೇ ನಮಿತಾ ನಿಜವಾಗಿ ಬಾವಿಗೆ ಬಿದ್ದರೆಂಬಂತೆ ಸ್ಥಳದಲ್ಲಿದ್ದವರು ಗಾಬರಿಗೊಂಡಿದ್ದಾರೆ ಎಂದಿದ್ದಾರೆ. ಸುಮಾರು ವರ್ಷಗಳಿಂದ ಚಿತ್ರರಂಗಕ್ಕೆ ದೂರವಿದ್ದ ನಟಿ ನಮಿತಾ ಇದೀಗ ಚಿತ್ರರಂಗದತ್ತ ಮುಖಮಾಡಿದ್ದಾರೆ. ಪ್ರಸ್ತುತ ಬೌ ಬೌ ಎಂಬ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ನಮಿತಾ ಚಿತ್ರವನ್ನು ಸಹ ನಿರ್ಮಾಣ ಮಾಡುತ್ತಿದ್ದಾರೆ.

ಇನ್ನೂ ಸಸ್ಪೆನ್ಸ್ ಥ್ರಿಲ್ಲರ್ ಆಧಾರಿತ ಚಿತ್ರವಾಗಿದ್ದು, ತಿರುವನಂತಪುರದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಜೊತೆಗೆ ಈ ಚಿತ್ರದಲ್ಲಿ ನಾಯಿ ಪ್ರಮುಖ ಪಾತ್ರವಹಿಸಿದ್ದು, ತಮಿಳು ಸೇರಿದಂತೆ ಹಲವು ಭಾಷೆಯಲ್ಲಿ ರಿಲೀಸ್ ಆಗಲಿದೆಯಂತೆ. ನಟಿ ನಮಿತಾ ಕಿರುತೆರೆಯಲ್ಲೂ ಹಾಗೂ ಡ್ಯಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ಜಡ್ಜ್ ಆಗಿ ಸಹ ಕಾಣಿಸಿಕೊಂಡಿದ್ದರು.


Spread the love

About Laxminews 24x7

Check Also

ಪರಿಷತ್‌ ಚುನಾವಣೆ: ಟಿ.ಎ.ಶರವಣ ಜೆಡಿಎಸ್ ಅಭ್ಯರ್ಥಿ

Spread the love ಬೆಂಗಳೂರು: ಕರ್ನಾಟಕದ ವಿಧಾನ ಸಭೆಯಿಂದ ವಿಧಾನ ಪರಿಷತ್‌ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಟಿ.ಎ.ಶರವಣ ಆಯ್ಕೆಯಾಗಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ