Breaking News
Home / ರಾಜ್ಯ / ಗಣರಾಜ್ಯೋತ್ಸವ ಪರೇಡ್‍ನಲ್ಲಿ ರಂಗಾಯಣ ಕಲಾವಿದರು

ಗಣರಾಜ್ಯೋತ್ಸವ ಪರೇಡ್‍ನಲ್ಲಿ ರಂಗಾಯಣ ಕಲಾವಿದರು

Spread the love

ಶಿವಮೊಗ್ಗ: ಈ ಬಾರಿ ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‍ಗೆ ಶಿವಮೊಗ್ಗದ ರಂಗಾಯಣ ಕಲಾವಿದರು ಆಯ್ಕೆಯಾಗಿದ್ದಾರೆ.

ವಿಜಯನಗರ ಸಂಸ್ಥಾನದ ಇತಿಹಾಸ ಬಿಂಬಿಸುವ ರಾಜ್ಯದ ಸ್ತಬ್ಧಚಿತ್ರದ ಪಾತ್ರಗಳಿಗೆ ಜೀವ ತುಂಬಲಿದ್ದಾರೆ. ಖ್ಯಾತ ಕಲಾ ನಿರ್ದೇಶಕ ಶಶಿಧರ ಅಡಪ ಸ್ತಬ್ಧಚಿತ್ರ ವಿನ್ಯಾಸ ಮಾಡಿದ್ದಾರೆ ಎಂದು ರಂಗಾಯಣ ನಿರ್ದೇಶಕ ಸಂದೇಶ ಜವಳಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದೇಶದ 14 ರಾಜ್ಯಗಳ ಸ್ತಬ್ಧಚಿತ್ರಗಳು ಭಾಗವಹಿಸುತ್ತಿದ್ದು, ಅದರಲ್ಲಿ ರಾಜ್ಯದಿಂದ ವಿಜಯನಗರದ ಇತಿಹಾಸ ಸಾರುವ ಸ್ತಬ್ಧಚಿತ್ರ ಆಯ್ಕೆಯಾಗಿದೆ. ಇದೇ ಮೊದಲ ಬಾರಿಗೆ ಶಿವಮೊಗ್ಗ ರಂಗಾಯಣ ಕಲಾವಿದರಿಗೆ ಅವಕಾಶ ಸಿಕ್ಕಿದೆ ಎಂದರು.

12 ಕಲಾವಿದರಾದ ಆರ್.ಪ್ರಸನ್ನ ಕುಮಾರ್, ಡಿ.ಆರ್. ನಿತಿನ್, ರಮ್ಯ ಆರ್., ಸವಿತಾ ಆರ್. ಕಾಳಿ, ಆರ್. ರಂಜಿತಾ, ಎಂ.ಎಚ್. ದೀಪ್ತಿ, ಎಸ್.ಎಂ. ರವಿಕುಮಾರ್, ಸುಜಿತ್ ಕಾರ್ಕಳ, ಎನ್.

ಚಂದನ್, ಎಂ.ಎಲ್. ಶರತ್ ಬಾಬು, ಬಿ.ಕೆ. ಮಹಾಬಲೇಶ್ವರ್, ಕಾರ್ತಿಕ ಕಲ್ಲುಕುಟಿಕರ್ ಭಾಗವಹಿಸಲಿದ್ದಾರೆ. ಜ.12ರಂದು ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ವಿವರಿಸಿದರು.


Spread the love

About Laxminews 24x7

Check Also

ಸರ್ಕಾರಿ ವಾಹನದಲ್ಲಿ ಬಿಜೆಪಿ ಹಣ ಸಾಗಣೆ: ದಿನೇಶ್‌ ಗುಂಡೂರಾವ್

Spread the loveಮೈಸೂರು: ‘ಬಿಜೆಪಿ ನಾಯಕರು ಸರ್ಕಾರಿ ವಾಹನಗಳಲ್ಲಿ ಕೋಟ್ಯಂತರ ರೂಪಾಯಿ ಸಾಗಿಸಿ ಹಂಚುತ್ತಿದ್ದಾರೆ. ಐಟಿ, ಇಡಿ ರಕ್ಷಣೆಯಲ್ಲೇ ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ