Breaking News

ವೈದ್ಯರ ಸಲಹೆಯಂತೆ ನಡೆದ್ರೆ ಉಳಿತಾರೇ, ಇಲ್ಲದಿದ್ರೆ ಸತ್ತರೆ ಅವರು ಸಾಯ್ತಾರೆ.:ಸುರೇಶ ಅಂಗಡಿ

Spread the love

ಬೆಳಗಾವಿ: ಕೊರೊನಾ ಸೋಂಕಿತರು ವೈದ್ಯರ ಸಲಹೆಯಂತೆ ನಡೆದ್ರೆ ಉಳಿತಾರೇ, ಇಲ್ಲದಿದ್ರೆ ಸತ್ತರೆ ಅವರು ಸಾಯ್ತಾರೆ. ನಾವೇಕೆ ತೆಲೆ ಕೆಡಿಸಿಕೊಳ್ಳಬೇಕಿಗ ? ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯಲ್ಲಿ ಸೋಂಕಿತರು ಅಂತರ ಕಾಯ್ದುಕೊಳ್ಳುತ್ತಿಲ್ಲವೆಂದು ಮಾಧ್ಯಮದವರ ಪ್ರಶ್ನೇಗೆ ಸಚಿವರು ಉತ್ತರಿಸಿದ್ದಾರೆ.

ಅಂತರ ಕಾಯ್ದುಕೊಳ್ಳದಿದ್ರೆ ಹೇಗೆ ಆರೋಗ್ಯದಲ್ಲಿ ಅಭಿವೃದ್ಧಿಯಾಗಲಿದೆ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು. ಜತೆಗೆ ಯಾವ ನಂಬರ ಸೋಂಕಿತರು ಅಂತರ ಕಾಯ್ದುಕೊಳ್ಳುತ್ತಿಲ್ಲವೆಂದು ತಿಳಿಸಿ, ಅವರನ್ನು ಇಲ್ಲಿಯೇ ಕರೆಸುತ್ತೆನೆ ಎಂದರು.

ಕೊರೊನಾ ಸೋಂಕು ದೃಢ ಪಡುವ ಮೊದಲು ಸಾಮೂಹಿಕ ಕ್ವಾರಂಟೈನ್ ನಲ್ಲಿ ಅಂತರ ಕಾಯ್ದುಕೊಳ್ಳುತ್ತಿಲ್ಲ ಎಂದು ಮಾಧ್ಯಮದವರ ಮತ್ತೊಂದು ಪ್ರಶ್ನೇಗೆ ಪ್ರತಿಕ್ರಿಸಿದ ಅವರು, ಈಗಾಗಲೇ ಅಂತರ ಕಾಯ್ದುಕೊಳ್ಳುವಂತೆ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ವೈದ್ಯರು ಹೇಳಿದ್ದೆವೆ. ಆದ್ರೆ ಕಾಯ್ದುಕೊಳ್ಳುತ್ತಿಲ್ಲವೆಂದ್ರೆ ಸತ್ತರೇ ಅವರು ಸಾಯ್ತಾರೆ. ನಾವ್ಯಾಕ್ ತಲೆ ಕೆಡಿಸಿಕೊಳ್ಳಬೇಕಿಗ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಇನ್ನೊಂದೆಡೆ ಸಂಸದರಾಗಿ, ಒಬ್ಬ ಜನಪ್ರತಿನಿಧಿಯಾಗಿ ಈ ರೀತಿಯ ಮಾತುಗಳನ್ನು ಆಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾಮಾನ್ಯ ಜನರ ಪ್ರಶ್ನೇಯಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ