Breaking News

ಇಲ್ಲೊಬ್ಬಳು ಮಹಿಳೆ ತನ್ನ ಆಪ್ತ ಸ್ನೇಹಿತನ ತಂದೆಯನ್ನು ವಿವಾಹವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ.

Spread the love

ಪ್ರೀತಿ ಕುರುಡು ಎಂಬ ಮಾತಿದೆ. ಎಷ್ಟೇ ಪ್ರಾಯದವರು ಕೂಡ ಪ್ರೀತಿ ಎಂಬ ಬಲೆಗೆ ಬೀಳುತ್ತಾರೆ. ಅದರಂತೆ ಇಲ್ಲೊಬ್ಬಳು ಮಹಿಳೆ ತನ್ನ ಆಪ್ತ ಸ್ನೇಹಿತನ ತಂದೆಯನ್ನು ವಿವಾಹವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ.

41 ವರ್ಷದ ಬೆಕಿ ಪ್ರೈಸ್ ಎಂಬಾಕೆ 64 ವರ್ಷದ ಬ್ಲೂ ಪ್ರೈಸ್​​​ರನ್ನು ವಿವಾಹವಾಗಿದ್ದಾಳೆ. ಕ್ಯಾಥರಿನ್ ಲೊಟ್ ಅವರ ಸ್ನೇಹಿತೆಯಾಗಿದ್ದ ಬೆಕಿ ಪ್ರೈಸ್ ಆಕೆಯ ತಂದೆಯನ್ನೇ ವಿವಾಹವಾಗಿದ್ದಾಳೆ.

ಪ್ರಾರಂಭದಲ್ಲಿ ಇವರಿಬ್ಬರು ಡೇಟಿಂಗ್ ನಡೆಸುತ್ತಾರೆ. ನಂತರ ಈ ಜೋಡಿಯ ನಡುವೆ ಪ್ರೀತಿ ಚಿಗುರೊಡೆಯುತ್ತದೆ. ಆ ಬಳಿಕ ಬೆಕಿ ಪ್ರೈಸ್ ಅವರು ಬ್ಲೂ ಪ್ರೈಸ್​ರನ್ನು ವಿವಾಹವಾಗುತ್ತಾಳೆ.

ಬೆಕಿ ಮತ್ತು ಬ್ಲೂ ನಡುವೆ 23 ವರ್ಷದ ಅಂತರವಿದೆ. ಅಷ್ಟು ಮಾತ್ರವಲ್ಲದೆ, ಬ್ಲೂವಿನ ಮಗಳ ವಯಸ್ಸನ್ನು ಆಕೆ ಹೊಂದಿದ್ದಾಳೆ ಎಂಬುದು ಅಚ್ಚರಿಯ ವಿಚಾರವಾಗಿದೆ.

ಬೆಕಿ 24 ವರ್ಷ ವಯಸ್ಸಿದ್ದಾಗ ಬ್ಲೂ ಆಕೆಯನ್ನು ಭೇಟಿ ಮಾಡಿದ್ದರು. ಆ ಸಮಯದಲ್ಲಿ ಬ್ಲೂಗೆ ಬೇರೆಯೊಬ್ಬಳೊಂದಿಗೆ ವಿವಾಹವಾಗಿತ್ತು. ಮಾತ್ರವಲ್ಲದೆ. ಆತನ ಕಿರಿಯ ಮಗುವಿಗಿಂತ ಬೆಕಿ 4 ವರ್ಷ ವಯಸ್ಸಿನವಳಾಗಿದ್ದಳು

ಬೆಕಿಯ ತಂದೆ 68 ವಯಸ್ಸಿನಲ್ಲಿ ನಿಧನ ಹೊಂದಿದ್ದರು. ಆ ಬಳಿಕ ಬೆಕಿ ಮತ್ತು ಬ್ಲೂ ನಡುವೆ ಸಂಬಂಧ ಹುಟ್ಟಿಕೊಂಡಿತ್ತು. ಇಬ್ಬರು ಸಂದೇಶ ಕಳುಹಿಸುತ್ತಿದ್ದರು.

ಈ ಬಗ್ಗೆ ಬೆಕಿ ಮಾತನಾಡಿದ್ದು, ನಾನು ಆತನನ್ನು ಪ್ರೀತಿಸುತ್ತೇನೆ. ಅವನು ಹಾಸ್ಯ ಮತ್ತು ತಮಾಷೆ ಮಾಡುತ್ತಾನೆ. ಆತ ನನಗೆ ಅದ್ಭುತ ಎಂದೆನಿಸಿಕೊಂಡಿದ್ದಾನೆ. ಹಿಂದೊಮ್ಮೆ ಆತನೊಂದಿಗೆ ವಿವಾಹವಾಗು ಎಂದು ಹೇಳಿದ್ದೆ ಎಂದರು.</dd> <dd>

ನಂತರ ಮಾತನಾಡಿದ ಬೆಕಿ, ಕ್ಯಾಥರಿನ್ ಮತ್ತು ನಾನು ಉತ್ತಮ ಸ್ನೇಹಿತರಾಗಿದ್ದೆವು. ನಾವು ಕೆಲಸ ಮಾಡುವ ಸಮಯದಲ್ಲಿ ಸ್ನೇಹಿತೆಯರಾದೆವು. ಆಕೆಯ ಮೂಲಕ ಬ್ಲೂ ಅವರನ್ನು ಭೇಟಿ ಮಾಡಿದೆ.

ಬ್ಲೂ ಅವರನ್ನು ನಾನು ವಿವಾಹವಾದ ನಂತರ ಅನೇಕರು ನನ್ನ ಬಗ್ಗೆ ವಿರುದ್ಧವಾಗಿ ಮಾತನಾಡಿದರು. ಅನೇಕರು ನನ್ನೊಂದಿಗಿನ ಸ್ನೇಹವನ್ನು ಕೊನೆಗೊಳಿಸಿದರು. ಆದರೆ ನಾನು ಬ್ಲೂ ಸುಖವಾಗಿ ಬಾಳುತ್ತಿದ್ದೇವೆ ಎಂದರು.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ