ಬೆಳಗಾವಿ- ಚಿಕ್ಕೋಡಿ ಮತ್ತು ಗೋಕಾಕ ಎರಡನ್ನೂ ಪ್ರತ್ಯೇಕವಾಗಿ ಜಿಲ್ಲೆ ಎಂದು ಘೋಷಣೆ ಮಾಡಲೇಬೇಕು ಅದು ಸರಕಾರದ ಜವಾಬ್ದಾರಿಯಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ
ಇಂದು ಬೆಳಗಾವಿ ನಗರದ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು ಐದಾರು ತಿಂಗಳಿನಲ್ಲಿ ಗೋಕಾಕನ್ನ ಜಿಲ್ಲೆಯನ್ನಾಗಿ ಘೋಷಣೆ ಮಾಡುತ್ತೆವೆ ಎಂಬ ಸಚಿವ ರಮೇಶ ಜಾರಕಿಹೊಳಿ ಅವರ ಮಾತಿಗೆ ಪ್ರತಿಕ್ರಿಯಿಸಿದ ಗೋಕಾಕ ಮತ್ತು ಚಿಕ್ಕೋಡಿ ಎರಡು ಪ್ರತ್ಯೇಕ ಜಿಲ್ಲೆಯನ್ನಾಡಿ ಘೋಷಣೆ ಮಾಡಲೇ ಬೇಕು ಮೊದಲಿನಿಂದಲೂ ಅವುಗಳನ್ನು ಜಿಲ್ಲೆಗಳನ್ನಾಗಿ ಘೋಷಣೆ ಮಾಡುವ ನಿರ್ಧಾರ ಮಾಡಲಾಗಿದ್ದು ಕಾರಣಾಂತರಗಳಿಂದ ಆಗಿರಲಿಲ್ಲ.ಆದರೆ ಈಗ ಸರಕಾರ ಅವುಗಳನ್ನ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಅದು ಸರಕಾರದ ಜವಾಬ್ದಾರಿ ಎಂದರು. ಇನ್ನು ನಗರ ಪಾಲಿಕೆ ಚುನಾವಣೆ ಕುರಿತು ಕಾಂಗ್ರೆಸ್ ಪಕ್ಷದಲ್ಲಿ ತಯಾರಿ ನಡೆದಿದೆ ಲೋಕಸಭೆ ಚುನಾವಣೆಗೆ ಸಂಭಂಧಿಸಿದಂತೆ ಇನ್ನೂ ಸಭೆಗಳನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೆವೆ ಎಂದರು
Laxmi News 24×7