Breaking News

ಸ್ಕೇಟಿಂಗ್‌ನಲ್ಲಿ ದೇಶಕ್ಕೆ ಕಂಚಿನದ ಪದಕ ತಂದ ಬೆಳಗಾವಿಯ ಶುಭಂ ಸಾಖೆ!

Spread the love

ಖಾನಾಪುರ: ಸ್ಕೇಟಿಂಗ್‌ನಲ್ಲಿ ದೇಶಕ್ಕೆ ಕಂಚಿನದ ಪದಕ ತಂದ ಬೆಳಗಾವಿಯ ಶುಭಂ ಸಾಖೆ!
ಚಂಡೀಗಢದಲ್ಲಿ ನಡೆದ ಮುಕ್ತ ರಾಷ್ಟ್ರೀಯ ರ್ಯಾಂಮಕಿಂಗ್ ಸ್ಕೇಟಿಂಗ್ ಟೂರ್ನಮೆಂಟ್‌ನ ‘ಡೌನ್‌ಹಿಲ್’ ವಿಭಾಗದಲ್ಲಿ ಬೆಳಗಾವಿಯ ಪ್ರತಿಭಾನ್ವಿತ ಆಟಗಾರ ಶುಭಂ ಸಾಖೆ ಅದ್ಭುತ ಸಾಧನೆ ಮಾಡುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾನೆ.
ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನ ಸ್ಕೇಟರ್ ಆಗಿರುವ ಶುಭಂ ಸಾಖೆ, ದೇಶಾದ್ಯಂತ ಸುಮಾರು 200ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದ ಈ ಪ್ರತಿಷ್ಠಿತ ಸ್ಪರ್ಧೆಯ ‘ಡೌನ್‌ಹಿಲ್’ ವಿಭಾಗದಲ್ಲಿ ತೀವ್ರ ಪೈಪೋಟಿ ನಡೆಸಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಶುಭಂ ಅವರು ತರಬೇತುದಾರರಾದ ಸೂರ್ಯಕಾಂತ್ ಹಿಂಡಲಗೇಕರ್, ಯೋಗೇಶ್ ಕುಲಕರ್ಣಿ, ವಿಶಾಲ್ ವೇಸಣೆ, ವಿಠ್ಠಲ ಗಂಗಣೆ ಹಾಗೂ ಸೋಹಮ್ ಹಿಂಡಲಗೇಕರ್ ಅವರ ಮಾರ್ಗದರ್ಶನದಲ್ಲಿ ಸತತ ಅಭ್ಯಾಸ ನಡೆಸುತ್ತಿದ್ದರು. ಈ ಅಭೂತಪೂರ್ವ ಸಾಧನೆಗೆ ಡಾ. ಪ್ರಭಾಕರ್ ಕೋರೆ, ಮಾಜಿ ಶಾಸಕ ಶ್ಯಾಮ್ ಘಾಟಗೆ, ರಾಜ್ ಘಾಟಗೆ, ಉಮೇಶ್ ಕಳಗಟಗಿ, ಪ್ರಸಾದ್ ತೆಂಡೂಲ್ಕರ್ ಹಾಗೂ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಇಂದುಧರ ಸೀತಾರಾಮ್ ಅಭಿನಂದನೆ ಸಲ್ಲಿಸಿ, ಮುಂದಿನ ಕ್ರೀಡಾ ಜೀವನಕ್ಕೆ ಶುಭ ಹಾರೈಸಿದ್ದಾರೆ

Spread the love

About Laxminews 24x7

Check Also

ಶಿಕ್ಷಣದ ದೇಗುಲ ಕಳಂಕ: ಕ್ಲಾಸ್‌ರೂಮ್‌ನಲ್ಲೇ ಶಿಕ್ಷಕ-ಶಿಕ್ಷಕಿ ರೊಮ್ಯಾನ್ಸ್, ಹೆಂಡತಿ ಇಟ್ಟಿದ್ದ ಹಿಡನ್ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ ಕಾಮುಕ!

Spread the love ಶಿಕ್ಷಣದ ದೇಗುಲ ಕಳಂಕ: ಕ್ಲಾಸ್‌ರೂಮ್‌ನಲ್ಲೇ ಶಿಕ್ಷಕ-ಶಿಕ್ಷಕಿ ರೊಮ್ಯಾನ್ಸ್, ಹೆಂಡತಿ ಇಟ್ಟಿದ್ದ ಹಿಡನ್ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ ಕಾಮುಕ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ