Breaking News

ರಾಷ್ಟ್ರೀಯ ಮಟ್ಟದ ಲೆಗ್​ ಬಾಲ್​ ಕ್ರಿಕೆಟ್​ ಟೂರ್ನಿಗೆ ಚಿಕ್ಕಮಗಳೂರಿನ 18 ಬಾಲಕರು ಆಯ್ಕೆಯಾಗಿದ್ದಾರೆ

Spread the love

ರಾಷ್ಟ್ರೀಯ ಮಟ್ಟದ ಲೆಗ್​ ಬಾಲ್​ ಕ್ರಿಕೆಟ್​ ಟೂರ್ನಿಗೆ ಚಿಕ್ಕಮಗಳೂರಿನ 18 ಬಾಲಕರು ಆಯ್ಕೆಯಾಗಿದ್ದಾರೆ

ಚಿಕ್ಕಮಗಳೂರು: ರೆಡ್​ ಬಾಲ್​, ವೈಟ್​ ಬಾಲ್​ ಕ್ರಿಕೆಟ್​ ಬಗ್ಗೆ ಕೇಳಿದ್ದೇವೆ. ಇದರ ನಡುವೆ, ಲೆಗ್​ ಬಾಲ್​ ಕ್ರಿಕೆಟ್​ ಕೂಡಾ ಜನಪ್ರಿಯತೆ ಪಡೆಯುತ್ತಿದೆ. ಈ ಕ್ರೀಡೆಯಲ್ಲಿ ಚಿಕ್ಕಮಗಳೂರಿನ 18 ಮಕ್ಕಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಸಜ್ಜಾಗಿದ್ದಾರೆ.

ಲೆಗ್ ಬಾಲ್ ಕ್ರಿಕೆಟ್ ದಕ್ಷಿಣ ಏಷ್ಯಾ ದೇಶಗಳಾದ ಭಾರತ, ನೇಪಾಳ, ಭೂತನ್‌ನಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಪ್ರತಿ ತಂಡದಲ್ಲಿ 11 ಜನರು ಆಟಗಾರರಿರುತ್ತಾರೆ. ವಿಕೆಟ್​ ಇರುತ್ತದೆ. ಬೌಲರ್​ ಫುಟ್ಬಾಲ್​ ಅನ್ನು ಅಂಡರ್​ ಆರ್ಮ್​ ಮೂಲಕ ಎಸೆಯುತ್ತಾರೆ. ಎದುರಾಳಿ ಬ್ಯಾಟ್​ ಬದಲಾಗಿ ತನ್ನ ಕಾಲಿನಿಂದಲೇ ಬಾಲ್​ ಹೊಡೆಯಬೇಕು. ಈ ರೀತಿ ಬಲವಾಗಿ ಹೊಡೆದಾಗ ಆ ಬಾಲ್​ ಬೌಂಡರಿ ಲೈನ್‌ಗೆ ಹೋದರೆ ಫೋರ್, ಬೌಂಡರಿನಿಂದ ಆಚೆ ಬಿದ್ದರೆ ಸಿಕ್ಸ್ ಎಂದು ಪರಿಗಣಿಸಲಾಗುತ್ತದೆ. ಕಾಲಿನಲ್ಲಿ ಆಡುವ ಈ ಗೇಮ್ ದೈಹಿಕ ಶಕ್ತಿಯನ್ನು ಹೆಚ್ಚು ಬೇಡುತ್ತದೆ.

ಭಾರತದಲ್ಲಿ 2011ರಿಂದಲೇ ಲೆಗ್​ ಕ್ರಿಕೆಟ್​ ಫೆಡರೇಷನ್​ ಇದ್ದು, ಮಹಿಳಾ ಮತ್ತು ಪುರುಷರ ತಂಡಗಳಿವೆ. ಈ ಕ್ರೀಡೆಯಲ್ಲಿ ಇದೀಗ ಕರ್ನಾಟಕವನ್ನು ಚಿಕ್ಕಮಗಳೂರಿನ ಬಾಲಕರು ಪ್ರತಿನಿಧಿಸುತ್ತಿದ್ದಾರೆ.

ಈ ಸಲ ರಾಷ್ಟ್ರ ಮಟ್ಟದ ಲೆಗ್​ ಬಾಲ್​ ಕ್ರಿಕೆಟ್​ ಟೂರ್ನಿ ಮಹಾರಾಷ್ಟ್ರದ ನಾಸಿಕ್​ನಲ್ಲಿ ನಡೆಯಲಿದೆ. ಕರ್ನಾಟಕದ ಜೂನಿಯರ್ ಹಾಗೂ ಸಬ್ ಜೂನಿಯರ್​ ತಂಡದಲ್ಲಿ ಕಡೂರು ತಾಲೂಕಿನ ಬೀರೂರು ಪಟ್ಟಣದ ದೇವರಹಳ್ಳಿಯಲ್ಲಿರುವ ಶ್ರೀ ಗುರು ಕ್ರೈಸ್ತ ಶರಣ ಶಾಲೆಯ ವಿದ್ಯಾರ್ಥಿಗಳಿದ್ದಾರೆ.

ಜೂನಿಯರ್ ವಿಭಾಗ: 12 ವರ್ಷದ ಬಾಲಕರ ತಂಡದಲ್ಲಿ ಹೇಮಂತ ಮಾರುತಿ, ಬೆಂಜೊಯ್, ಜ್ಞಾನೇಶ್,ತೇಜಸ್ ದ್ರುವ. (ನಾಯಕ) ತೇಜಸ್ ಎಚ್.ಎಲ್, ಚಿರಂಜೀವಿ ಷಣ್ಮುಖ ಸ್ಥಾನ ಪಡೆದಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ