ಬೆಂಗಳೂರು: ಟೀಕಿಸುವ ಭರದಲ್ಲಿ ಅಸಂವಿಧಾನಿಕ ಹೇಳಿಕೆ ನೀಡಿದ್ದ ಸಂಬಂಧ ಕಾಂಗ್ರೆಸ್ನ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ಸದನದಿಂದ ಅಮಾನತು ಮಾಡಬೇಕೆಂಬ ಪ್ರತಿಪಕ್ಷದ ಒತ್ತಾಯಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಅವರು ರೂಲಿಂಗ್ ನೀಡುವ ಮೂಲಕ ಎರಡು ದಿನಗಳಿಂದ ನಡೆಯುತ್ತಿದ್ದ ಗದ್ದಲಕ್ಕೆ ತೆರೆ ಎಳೆದಿದ್ದಾರೆ.![]()
ಇಂದು ಸದನ ಆರಂಭವಾಗುತ್ತಿದ್ದಂತೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ನಮ್ಮನ್ನು ನಿಂದಿಸಿರುವ ಹರಿಪ್ರಸಾದ್ ಅವರು ಕ್ಷಮೆಯಾಚಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ. ಹೀಗಾಗಿ, ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಹೊರಟ್ಟಿ, ಸದನದಲ್ಲಿ ಕೆಲ ಘಟನೆ ನಡೆದಿದೆ. ಈ ಬಗ್ಗೆ ಸರ್ಕಾರ ವಿಷಾದ ವ್ಯಕ್ತಪಡಿಸಿದೆ. ಈ ಬಗ್ಗೆ ಇನ್ನು ಯಾರೂ ಮಾತನಾಡಬಾರದು ಎಂದು ರೂಲಿಂಗ್ ನೀಡಿದರು.
ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಮಾತನಾಡಿ, ಮಾತಿನ ಭರದಲ್ಲಿ ಕೆಲ ಪದಗಳು ಬಳಕೆಯಾಗಿವೆ. ಇದನ್ನು ಮುಂದುವರೆಸುವುದು ಸರಿಯಲ್ಲ. ಈ ಹಿಂದೆ ಗುಂಡೂರಾವ್ ಮೂಖ್ಯಮಂತ್ರಿ ಆಗಿದ್ದಾಗ ಸಿ.ಎಂ.ಇಬ್ರಾಹಿಂ ಅವರು ದೇವರಾಜು ಅರಸು ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಇಡೀ ಸದನ ಅದನ್ನು ಒಪ್ಪಿರಲಿಲ್ಲ. ಹೀಗಾಗಿ, ಇದನ್ನು ಇಲ್ಲಿಗೇ ಬಿಟ್ಟು ಬಿಡಿ ಎಂದು ಮನವಿ ಮಾಡಿದರು.
Laxmi News 24×7