Breaking News

ಹುಕ್ಕೇರಿಗೆ ಪ್ರೋಬೇಷನರಿ ಐಎಎಸ್ ಅಧಿಕಾರಿ ಜೈನ ಭೇಟಿ

Spread the love

ಹುಕ್ಕೇರಿ : ತಾಲೂಕಿನ ಬೆಳವಿ, ಕಮತನೂರ ಗ್ರಾಮಗಳು ಸೇರಿದಂತೆ ವಿವಿಧೆಡೆ ಅನಿರೀಕ್ಷಿತ ಮಿಂಚಿನ ಸಂಚಾರ ನಡೆಸಿದ ಐಎಎಸ್ ಪ್ರೋಬೇಷನರಿ ಅಧಿಕಾರಿ ಅಭಿನವ ಜೈನ ಅವರು, ಸ್ಥಳೀಯ ಆಡಳಿತ ಕುರಿತು ಮಾಹಿತಿ ಪಡೆದರು.May be an image of one or more people, people smiling, suit and temple
ತಾಲೂಕಿನ ಬೆಳವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಸ್ಥಾಪಿಸಿದ ಘನತ್ಯಾಜ್ಯ ವಿಲೇವಾರಿ ಘಟಕ ಮತ್ತು ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಅಳವಡಿಸಿದ ಪ್ಲಾಸ್ಟಿಕ್ ವಿಲೇವಾರಿ ಯಂತ್ರೋಪಕರಣಗಳನ್ನು ವೀಕ್ಷಿಸಿದ ಐಎಎಸ್ ಪ್ರೋಬೇಷನರಿ ಅಧಿಕಾರಿ ಅಭಿನವ ಜೈನ, ಸಮಪರ್ಕ ಕಸ ವಿಲೇವಾರಿ ಕುರಿತು ಸಿಬ್ಬಂದಿಗಳಿಂದ ಮಾಹಿತಿ ಪಡೆದರು.
ಬೆಳವಿಯಲ್ಲಿ ಒಣ ಹಾಗೂ ಹಸಿ ಕಸ ಸಂಗ್ರಹಣೆ ಮತ್ತು ವಿಲೇವಾರಿ, ಪ್ಲಾಸ್ಟಿಕ್ ವಿಲೇವಾರಿ ವಿಧಾನ ಘಟಕಕ್ಕೆ ಭೇಟಿ ನೀಡಿದ ಜೈನ ಅವರು, ಈ ಕಾರ್ಯದಲ್ಲಿ ಮಹಿಳಾ ಸಂಘಗಳ ಪಾಲ್ಗೊಳ್ಳುವಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮದ ಸ್ವಚ್ಛ ಪರಿಸರಕ್ಕಾಗಿ ಜನಪ್ರತಿನಿಧಿಗಳು, ಅಧಿಕಾರಿ-ಸಿಬ್ಬಂದಿಗಳು ಹಾಗೂ ಸ್ವಸಹಾಯ ಸಂಘಗಳಿಗೆ ಕೆಲ ಸೂಕ್ತ ಸಲಹೆ ಸೂಚನೆ ನೀಡಿದರು.
ಬೆಳವಿಯಲ್ಲಿ ಒಣ ಹಾಗೂ ಹಸಿ ಕಸ ಸಂಗ್ರಹಣೆ ಮತ್ತು ವಿಲೇವಾರಿ, ಪ್ಲಾಸ್ಟಿಕ್ ವಿಲೇವಾರಿ ವಿಧಾನ ಘಟಕಕ್ಕೆ ಭೇಟಿ ನೀಡಿದ ಜೈನ ಅವರು, ಈ ಕಾರ್ಯದಲ್ಲಿ ಮಹಿಳಾ ಸಂಘಗಳ ಪಾಲ್ಗೊಳ್ಳುವಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮದ ಸ್ವಚ್ಛ ಪರಿಸರಕ್ಕಾಗಿ ಜನಪ್ರತಿನಿಧಿಗಳು, ಅಧಿಕಾರಿ-ಸಿಬ್ಬಂದಿಗಳು ಹಾಗೂ ಸ್ವಸಹಾಯ ಸಂಘಗಳಿಗೆ ಕೆಲ ಸೂಕ್ತ ಸಲಹೆ ಸೂಚನೆ ನೀಡಿದರು.
ಬಳಿಕ ಕಮತನೂರ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿದ ಪವಿತ್ರವನಕ್ಕೆ ಭೇಟಿ ನೀಡಿದ ಅಧಿಕಾರಿ ಜೈನ ಅವರು ಮಾತನಾಡಿ, ಇಲ್ಲಿನ ಶುದ್ಧ ಗಾಳಿ, ಪರಿಸರ ವಯಸ್ಕ ಮತ್ತು ಹಿರಿಯ ನಾಗರಿಕರ ವಿಶ್ರಾಂತಿಗೆ ಸಾಕಷ್ಟು ಅನುಕೂಲವಾಗಿದೆ. ಅಲ್ಲದೇ ವಾಯುವಿಹಾರ ಮನಸ್ಸಿಗೆ ನೆಮ್ಮದಿ ನೀಡುವ ವಾತಾವರಣವಿದೆ. ಜೊತೆಗೆ ಮಕ್ಕಳ ಆಟೋಟಕ್ಕೆ ಪ್ರಶಸ್ತ್ಯ ತಾಣವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ತಾಲೂಕು ಪಂಚಾಯಿತಿ ಇಒ ಟಿ.ಆರ್.ಮಲ್ಲಾಡದ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಎಇಇ ಅರವಿಂದ ಅಣ್ಣಿಗೇರಿ, ತಾಪಂ ಮ್ಯಾನೇಜರ್ ಅವಿನಾಶ ಹೊಳೆಪ್ಪಗೋಳ, ಪಿಡಿಒ ಶಂಕರ ಕಾಂಬಳೆ, ಸಿಬ್ಬಂದಿ ಶಕ್ತಿಸಿಂಗ್ ಕಟಾವಕರ, ಸ್ವಚ್ಛ ವಾಹಿನಿ ಸಾರಥಿ ನಿರ್ಮಲಾ ಕೆಳಗಡೆ ಮತ್ತಿತರರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ