Breaking News

10 ಎಕರೆ ಗೋಮಾಳ ಜಮೀನು ವಶಕ್ಕೆ ಪಡೆದ ಬೆಂಗಳೂರು ನಗರ ಜಿಲ್ಲಾಡಳಿತ

Spread the love

ಆನೇಕಲ್‌(ಬೆಂಗಳೂರು): ತಾಲೂಕಿನ ಜಿಗಣಿ-ಬನ್ನೇರುಘಟ್ಟ ಮುಖ್ಯರಸ್ತೆಯ ಕೊಪ್ಪ ಗೇಟ್​ಗೆ ಹೊಂದಿಕೊಂಡ ಕೊಪ್ಪ ಸರ್ವೆ ನಂ 110ರ 10 ಎಕರೆ ಗೋಮಾಳ ಜಮೀನನ್ನು ಬೆಂಗಳೂರು ನಗರ ಜಿಲ್ಲಾಡಳಿತ ಶನಿವಾರ ವಶಕ್ಕೆ ಪಡೆಯಿತು.

ಜಿಲ್ಲಾಧಿಕಾರಿ ಜಗದೀಶ್‌, ಉಪವಿಭಾಗಾಧಿಕಾರಿ ವಿಶ್ವನಾಥ್‌ ಹಾಗು ತಹಶೀಲ್ದಾರ್‌ ಶಶಿಧರ್‌ ಮಾಡ್ಯಾಳ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಸರ್ಕಾರಿ ಜಾಗದಲ್ಲಿ ಎಂಟು ಸೂಚನಾಫಲಕ ನೆಟ್ಟು, ಸುತ್ತಲೂ ತಂತಿ ಬೇಲಿ ಹಾಕಿಸುವ ಕೆಲಸಕ್ಕೆ ಕಂದಾಯ ಇಲಾಖೆ ಚಾಲನೆ ನೀಡಿದೆ.‌

ಸ್ಥಳದಲ್ಲಿ ಈ ಜಮೀನುಗಳನ್ನು ಅನುಭವಿಸುತ್ತಿದ್ದ ರೈತರು, ಕೆಲ ಸಂಘಟನೆಗಳು ಸೇರಿ ಅಡ್ಡಿಪಡಿಸುವ ಸಾಧ್ಯತೆ ಇದ್ದುದರಿಂದ ಬೆಂಗಳೂರು ಗ್ರಾಮಾಂತರ ಎಎಸ್ಪಿ ನಾಗರಾಜ್‌, ಡಿವೈಎಸ್ಪಿ ಮೋಹನ್‌ ಸಮೇತ ಎರಡು ಮೀಸಲು ಪಡೆ ವಾಹನಗಳ ಪೊಲೀಸರನ್ನು ನಿಯೋಜಿಸಲಾಗಿತ್ತು. ಕೆಲಕಾಲ ಮಾತಿನ ಚಕಮಕಿ ನಡೆಯಿತು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ