ದಾಖಲೆ ಬರೆದ ಸಿಎಂ ಸಿದ್ದರಾಮಯ್ಯ; ವಿಜಯಪುರ ನಗರದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ*
ಕರ್ನಾಟಕದ ಸುದೀರ್ಘ ಅವಧಿಯ ಸಿಎಂ ಎಂದು ಸಿಎಂ ಸಿದ್ದರಾಮಯ್ಯ ದಾಖಲೆ ಬರೆದಿದ್ದಾರೆ.ಈ ಹಿನ್ನೆಲೆಯಲ್ಲಿ ವಿಜಯಪುರ ನಗರದ ಹೃದಯ ಭಾಗದಲ್ಲಿರುವ ಗಾಂಧಿ ವೃತ್ತದಲ್ಲಿ ಡಿ ದೇವರಾಜ್ ಅರಸುರವರ ಏಳು ವರ್ಷ 2139 ದಿನಗಳ ಸುದೀರ್ಘ ಅವಧಿಯ ಮುಖ್ಯಮಂತ್ರಿಯ ದಾಖಲೆಯನ್ನು ಮುಖ್ಯಮಂತ್ರಿಗಳಾಗಿರುವ
ಸಿದ್ದರಾಮಯ್ಯನವರು ದಾಟಿ ಮುನ್ನುಗ್ಗುತ್ತಿರುವ ನಿಮಿತ್ಯ ಸಿದ್ದರಾಮಯ್ಯನವರ ಅಭಿಮಾನಿ ಬಳಗದಿಂದ ಪಟಾಕಿ ಸಿಡಿಸಿ ಸಿಹಿ ಹಂಚಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಮೋಹನ ದಳವಾಯಿ , ಸತೀಶ್ ಅಡವಿ, ಮಾಜಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬೀರಪ್ಪ ಜುಮನಾಳ, ಕುರುಬ ಸಮಾಜ ಮುಖಂಡರಾದ ದೇವಕಾಂತ ಬಿಜ್ಜರಗಿ, ವಾಗ್ಮಿಗಳಾದ ಮೋಹನ ಮೇಟಿ ಇನ್ನಿತರ ಸಮಾಜ ಮುಖಂಡರು ಭಾಗವಹಿಸಿದ್ದರು.
Laxmi News 24×7