Breaking News

ರಾಜ್ಯ ಹೈಕೋರ್ಟ್ʼನಿಂದ ಮಹತ್ವದ ಆದೇಶ: ʼಥರ್ಡ್ ಪಾರ್ಟಿ ವಿಮೆʼಯಿಂದ ಅಪಘಾತಕ್ಕೀಡಾದವ್ರಿಗೆ ʼಪರಿಹಾರ ಸಿಗಲ್ಲʼ

Spread the love

ಬೆಂಗಳೂರು: ಹೈಕೋರ್ಟ್ ಏಕಸದಸ್ಯ ಪೀಠದಿಂದ ಮಹತ್ವದ ಆದೇಶ ಹೊರಬಿದ್ದಿದ್ದು, ಥರ್ಡ್ ಪಾರ್ಟಿ ವಿಮೆಯಿಂದ ಅಪಘಾತಕ್ಕೀಡಾದವರಿಗೆ ಪರಿಹಾರ ನೀಡಲಾಗುವುದು. ಆದ್ರೆ, ಅಪಘಾತ ಮಾಡಿದ ವಾಹನದ ಹಿಂಬದಿ ಸವಾರ ಮತ್ತು ಸಹ ಪ್ರಯಾಣಿಕರಿಗೆ ಥರ್ಡ್ ಪಾರ್ಟಿ ವಿಮೆ ಪರಿಹಾರ ಸಿಗುವುದಿಲ್ಲ. ಆದ್ರೆ, ಪ್ರತ್ಯೇಕ ವಿಮೆ ಮೊತ್ತ ಭರಿಸಿದ್ರೆ ಮಾತ್ರ ಹಿಂಬದಿ ಸವಾರ, ಸಹ ಪ್ರಯಾಣಿಕರಿಗೂ ಪರಿಹಾರ ಅನ್ವಯವಾಗುತ್ತೆ. ಇಲ್ಲವಾದರೆ ವಿಮೆ‌ ಕಂಪನಿ ಪರಿಹಾರ ನೀಡಬೇಕಿಲ್ಲ ಎಂದು ಹೈಕೋರ್ಟ್​ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಕಾನೂನಿನಡಿ ಥರ್ಡ್ ಪಾರ್ಟಿ ವಿಮೆ ಕಡ್ಡಾಯವಾಗಿದ್ದು, ಖಾಸಗಿ ವಾಹನದ ಚಾಲಕ, ಸಹ ಪ್ರಯಾಣಿಕರ ವಿಮೆ ಐಚ್ಛಿಕ. ನ್ಯಾ. ಹಂಚಟೆ ಸಂಜೀವ್ ಕುಮಾರ್ ಅವರಿದ್ದ ಪೀಠ, ಅಪಘಾತದಲ್ಲಿ ಮೃತಪಟ್ಟರೆ ವಾಹನದ ಮಾಲೀಕನೇ ಹೊಣೆ ಎಂದು ಮಹತ್ವದ ತೀರ್ಪು ನೀಡಿದ್ದಾರೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ