Breaking News

“ಗೃಹಲಕ್ಷ್ಮೀ ಹಣ ಮಂಗಮಾಯಕ್ಕೆ ಕೊನೆಗೂ ಮುಕ್ತಿ”

Spread the love

“ಗೃಹಲಕ್ಷ್ಮೀ ಹಣ ಮಂಗಮಾಯಕ್ಕೆ ಕೊನೆಗೂ ಮುಕ್ತಿ”

ಫೆಬ್ರುವರಿ ಹಾಗೂ ಮಾರ್ಚ ತಿಂಗಳಿನ ಗ್ರಹಣ ಹಿಡಿದಿದ್ದ ಗೃಹಲಕ್ಷ್ಮೀಗೆ ಗ್ರಹಣ ಬಿಡಿಸಿ ಇಡೀ ಸದನದಲ್ಲಿ ಬಹಿರಂಗವಾಗಿ ತಪ್ಪೊಪ್ಪಿಗೆ ಮೂಲಕ ಕ್ಷಮೆಯಾಚಿಸುವಂತೆ ಮಾಡಿದ ಹುಬ್ಬಳ್ಳಿಯ ಜನಪ್ರೀಯ ಶಾಸಕ ಮಹೇಶ ಟೆಂಗಿನಕಾಯಿ.

ಹೌದು 2 ತಿಂಗಳ ಗೃಹಲಕ್ಷ್ಮೀ ಹಣ ಹಾಕದೇ ಜನರ ಕಣ್ಣಿಗೆ ಮಣ್ಣು ಎರೆಚಲು ಯತ್ನಿಸಿದ ರಾಜ್ಯ ಕಾಂಗ್ರೇಸ್ ಸರ್ಕಾರದ ನಡೆಯನ್ನು ಪ್ರಶ್ನಿಸಿ ಸದನಕ್ಕೆ ಸುಳ್ಳು ಮಾಹಿತಿ ನೀಡಿ ಸದನಕ್ಕೆ ಅಗೌರವ ತೋರಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ್ ಅವರು ಸದನಕ್ಕೆ ತಪ್ಪು ಸಂದೇಶ ರವಾನಿಸಿದ್ದರು.

ಆದರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ಶಾಸಕರಾದ ಶ್ರೀ ಮಹೇಶ ಟೆಂಗಿನಕಾಯಿ ಅವರು ವಿವಿಧ ಜಿಲ್ಲೆಗಳಿಂದ ಮಾಹಿತಿ ತರಿಸಿಕೊಂಡು ಕಾನೂನು ಹೋರಾಟಕ್ಕೆ ಸಿದ್ದರಾಗಿದ್ದರು ಅಷ್ಟರಲ್ಲೆ ಬೆಚ್ಚಿಬಿದ್ದ‌ ಕಾಂಗ್ರೇಸ್ ಸರ್ಕಾರ ಇಂದು ಸದನದಲ್ಲಿ ತನ್ನ ತಪ್ಪನ್ನಯ ಒಪ್ಪಿಕೊಂಡು ಕ್ಷಮೆಯಾಚಿಸಿ ಫೆಬ್ರುವರಿ ಹಾಗೂ ಮಾರ್ಚ ತಿಂಗಳ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿತು.

ಒಂದು ವೇಳೆ ಗೃಹಲಕ್ಷ್ಮಿ ಹಣದ ಬಗ್ಗೆ ಶಾಸಕರಾದ ಶ್ರೀ ಮಹೇಶ ಟೆಂಗಿನಕಾಯಿ, ಸದನದಲ್ಲಿ ಧ್ವನಿ ಎತ್ತದೇ ಇರದಿದ್ದರೆ ಅದು ಗ್ಯಾರಂಟಿಯಾಗಿ ಸಚಿವರ ಜೋಳಿಗೆ ಸೇರುತ್ತಿತ್ತು.

ನಿರಂತರವಾಗಿ ಈ ವಿಷಯದ ಕುರಿತು ಹೋರಾಟ ಮಾಡಿ ಸದನದ ಕಣ್ಣು ತೆರೆಯಿಸಿ ಸರ್ಕಾರವನ್ನು ಬಡಿದು ಎಬ್ಬಿಸಿದ ಶಾಸಕರಾದ ಶ್ರೀ ಮಹೇಶ ಟೆಂಗಿನಕಾಯಿ ಅವರಿಗೆ ಅಭಿನಂದನೆಗಳು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ