Breaking News

ಲಿಂಗರಾಜ ಕಾಲೇಜಿಗೆ ಸಮಗ್ರ ವೀರಾಗ್ರಣಿ ಲಿಂಗರಾಜ ಕಾಲೇಜು ಸತತ 9 ನೇ ಬಾರಿ ಚಾಂಪಿಯನ್

Spread the love

ಬೆಳಗಾವಿ: ವಿದ್ಯಾರ್ಥಿಗಳು ಏಷ್ಯನ್ ಗೇಮ್ಸ್, ಕಾಮನ್ ವೆಲ್ತ್, ಒಲಂಪಿಕ್ಸ್ ಕ್ರೀಡಾಕೂಟಗಳವರೆಗೂ ತಲುಪಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶವನ್ನು ಪ್ರತಿನಿಧಿಸಿ ಆ ಮೂಲಕ ದೇಶದ ಗೌರವವನ್ನು ಜಾಗತಿಕವಾಗಿ ರಾರಾಜಿಸುವಂತೆ ಮಾಡಬೇಕೆಂದು ಕೆ.ಎಲ್.ಇ ಸಂಸ್ಥೆಯ ಕಾರ್ಯಾದ್ಯಕ್ಷ ಡಾ.ಪಭಾಕರ ಕೊರೆಯವರು ಹೇಳಿದರು.
ಸಲ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ಆಯೋಜಿಸಿದ್ದ 9 ನೇ ಅಥ್ಲೆಟಿಕ್ ಕ್ರಿಡಾಕೂಟದಲ್ಲಿ 17 ದಾಖಲೆಗಳೊಂದಿಗೆ ಸತತ 9 ನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ವಿದ್ಯಾರ್ಥಿಗಳನ್ನು ಕೆ.ಎಲ್.ಇ ಸಂಸ್ಥೆಯ ಕಾರ್ಯಾದ್ಯಕ್ಷ ಡಾ.ಪಭಾಕರ ಕೊರೆಯವರು ಅಭಿನಂದಿಸಿದರು.
ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಎಲ್ಲ ವಿದ್ಯಾರ್ಥಿಗಳಿಗೆ ಕೆ.ಎಲ್.ಇ ಸಂಸ್ಥೆ ಎಲ್ಲ ರೀತಿಯ ಸಹಾಯ ಮತ್ತು ಪ್ರೋತ್ಸಾಹವನನ್ನು ನೀಡುವುದು ಎಂದು ಅವರು ತಿಳಿಸಿದರು.
ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನವ್ಹೆಂಬರ್ 28, 29 & 30 ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಆಯೋಜಿಸಿದ್ದ 9 ನೇ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಬೆಳಗಾವಿ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯ ಕ್ರೀಡಾಕೂಟದಲ್ಲಿ 17 ದಾಖಲೆಗಳೊಂದಿಗೆ ಸತತ 9 ನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿತು.
ಪುರುಷರ ವಿಭಾಗದಲ್ಲಿ 14 ಚಿನ್ನ, 8 ಬೆಳ್ಳಿ, 2 ಕಂಚಿನೊಂದಿಗೆ ಪುರುಷರ ವಿಭಾಗದ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆಯಿತು. ಮಹಿಳೆಯರ ವಿಭಾಗದಲ್ಲಿ 8 ಚಿನ್ನ, 5 ಬೆಳ್ಳಿ, 3 ಕಂಚಿನ ಪದಕದೊಂದಿಗೆ ಮಹಿಳಿಯರ ವಿಭಾಗದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆಯಿತು
ಕ್ರೀಡಾಕೂಟದ ಪುರುಷರ ವಿಭಾಗದ ವೈಯಕ್ತಿಕ ವಿರಾಗ್ರಣಿ ಪ್ರಶಸ್ತಿಯನ್ನು ಭೂಷನ್ ಪಾಟೀಲ ಮತ್ತು ಮಹಿಳೆಯರ ವಿಭಾಗದ ವೈಯಕ್ತಿಕ ವಿರಾಗ್ರಣಿ ಪ್ರಶಸ್ತಿಯನ್ನು ವೈಭವಿ ಬುದೂಕ್ ಪಡೆದುಕೊಂಡರು.
ಕ್ರೀಡಾಕೂಟದಲ್ಲಿ ಹಿಂದಿನ ಕ್ರೀಡಾಕೂಟದ ದಾಖಲೆ ಅಳಿಸಿ ಮಹವಿದ್ಯಾಲಯದ ವಿದ್ಯಾರ್ಥಿಗಳು 17 ಹೊಸ ದಾಖಲೆಗಳನ್ನು ಸೃಷ್ಟಿಸಿದ್ದಾರೆ. 100 ಮೀಟರ್ ಪುರುಷರ ಓಟ ಭೂಷನ್ ಪಾಟೀಲ, 100 ಮೀಟರ್ ಮಹಿಳೆಯರ ಓಟ ವೈಭವಿ ಬುದ್ರೂಕ್,100 ಮತ್ತು 200 ಮೀಟರ್ ಮಹಿಳೆಯರ ಅಡೆತಡೆ ಓಟ ಅಪೂರ್ವ ನಾಯಕ್, 110 ಮೀಟರ್ ಅಡೆತಡೆ ಓಟ ಸಂಜಯ್ ನಾಯ್ಕ್, 200 ಮತ್ತು 400 ಮೀಟರ್ ಪುರುಷರ ಓಟ ಶ್ರೀನಾಥ್ ದಳವಿ, 5000 ಮೀಟರ್ ಪುರುಷರ ಓಟ ವಿಜಯ ಸಾವತಕರ್, ಪುರುಷರ ಸರಪಳಿ ಗುಂಡು ಎಸೆತ ಚನ್ನವೀರೇಶ್ ಹಿಕ್ಕಿಮಠ, ಮಹಿಳೆಯರ ಸರಪಳಿ ಗುಂಡು ಎಸೆತ ಸ್ಪೃಹ ನಾಯಿಕ್ , ಪುರುಷರ ಭರ್ಚಿ ಎಸೆತ ಶಶಾಂಕ್ ಪಾಟೀಲ 400X100 ಮಹಿಳೆಯರ ರಿಲೇ ಓಟ, 400X400 ಮೀಕ್ಸ್ ರೀಲೇ ಓಟ
.
ಸಾದೈನೆಗೈದ ವಿದ್ಯಾರ್ಥಿಗಳನ್ನು ಕೆ.ಏಲ್.ಇ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು, ಕಾರ್ಯದರ್ಶಿಗಳು ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಹನಮಂತ ಮೇಲಿನಮನಿ, ಕ್ರೀಡಾ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಡಾ ಸಿ ರಾಮಾ ರಾವ್ ಮತ್ತು ಜಿಮಖಾನಾ ಉಪಾಧ್ಯಕ್ಷ ಶ್ರೀ ವಿನಾಯಕ ವರುಟೆ ಮತ್ತು ಎಲ್ಲ ಸಿಬ್ಬಂದಿ ಅಭಿನಂದಿಸಿದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ