ಬ್ರಹ್ಮಾ ಕುಮಾರೀಸ್” ನೂತನ ಭವನ ನಿರ್ಮಾಣಕ್ಕೆ ಚಾಲನೆ
“ಬ್ರಹ್ಮಾ ಕುಮಾರೀಸ್” ನೂತನ ಭವನ ನಿರ್ಮಾಣಕ್ಕೆ ಚಾಲನೆ
ಶಾಸ್ತ್ರೀನಗರದಲ್ಲಿ ನಿರ್ಮಾಣ ಕಾಮಗಾರಿ
ನಗರಸೇವಕ ಗಿರೀಶ್ ಧೋಂಗಡಿ ಇನ್ನುಳಿದವರು ಭಾಗಿ
ವಿವಿಧ ಗಣ್ಯರಿಂದ ಮಾರ್ಗದರ್ಶನ
ಬೆಳಗಾವಿಯ ಶಾಸ್ತ್ರೀನಗರದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ನೂತನ “ ಬ್ರಹ್ಮಾ ಕುಮಾರೀಸ್” ಭವನ ನಿರ್ಮಾಣಕ್ಕೆ ಕಾಮಗಾರಿಗೆ ಚಾಲನೆಯನ್ನು ನೀಡಲಾಯಿತು.
ಬೆಳಗಾವಿಯ ಶಾಸ್ತ್ರೀನಗರದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ನೂತನ “ ಬ್ರಹ್ಮಾ ಕುಮಾರೀಸ್” ಭವನ ನಿರ್ಮಾಣ ಮಾಡಲಾಗುತ್ತಿದೆ. ರಾಜಯೋಗಿನಿ ಬಿ.ಕೆ. ಅಂಬಿಕಾಜೀ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಗರಸೇವಕರಾದ ಗಿರೀಶ್ ಧೋಂಗಡಿ, ರಾಜು ಭಾತಕಾಂಗೆ, ಭರತ ರಛ ಉಪಸ್ಥಿತರಿದ್ದರು. ಗಣ್ಯರ ಹಸ್ತದಿಂದ ಈ ಕಾಮಗಾರಿಗೆ ಚಾಲನೆಯನ್ನು ನೀಡಲಾಯಿತು.
ಈ ವೇಳೆ ಮಾತನಾಡಿದ ನಗರಸೇವಕ ಗಿರೀಶ್ ಧೋಂಗಡಿ ಅವರು, ತಮ್ಮ ಕ್ಷೇತ್ರದಲ್ಲಿ ಪಾವನ ಸ್ಥಳವನ್ನು ನಿರ್ಮಿಸಲಾಗಿದೆ. ಕಳೆದ 5 ವರ್ಷಗಳಿಂದ ಪ್ರಜಾಪಿತಾ ಬ್ರಹ್ಮಕುಮಾರಿಯ ವಿಶ್ವವಿದ್ಯಾಲಯದೊಂದಿಗೆ ತಮ್ಮ ಒಡನಾಟವಿದೆ. ಎಲ್ಲರ ಹಿತದೃಷ್ಠಿಯಿಂದ ಈ ಭವನವನ್ನು ನಿರ್ಮಿಸಲು ಪ್ರಾಮಾಣಿಕವಾಗಿ ತನು ಮನ ಧನದಿಂದ ಪ್ರಯತ್ನಿಸಲಾಗುವುದೆಂದರು.
ಇನ್ನು ರಾಜಯೋಗಿನಿ ಬಿ.ಕೆ. ಅಂಬಿಕಾಜೀ ಅವರು ಸಾಮಾನ್ಯರ ಮನೆ ನಿರ್ಮಿಸುವುದೇ, ಕಷ್ಟದ ಮಾತಾಗಿರುತ್ತದೆ. ಅಂತಹದ್ದರಲ್ಲಿ ದೇವರ ಧ್ಯಾನಕ್ಕಾಗಿ ದೇವರ ಮನೆಯನ್ನು ನಿರ್ಮಿಸುವುದು ಅಸಾಧಾರಣ ಮಾತಲ್ಲ. ಎಲ್ಲರ ಸಹಯೋಗದಿಂದ ದೇವರ ಕೃಪೆಯಿಂದ ಇದು ಸಾಧ್ಯವಾಗಿದೆ. ಎಲ್ಲರೂ ಎಚ್ಚೆತ್ತುಕೊಂಡು ಸಕಾಲದಲ್ಲಿ ಸತ್ ಮಾರ್ಗದಲ್ಲಿ ನಡೆದು ತಮ್ಮ ಜೀವನವನ್ನು ಸುಧಾರಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅದೇ ರೀತಿ ರಾಜಯೋಗಿನಿ ಬಿ.ಕೆ. ಪ್ರತಿಭಾ ಅವರು, ಎಲ್ಲರ ಶುಭ ಸಂಕಲ್ಪಗಳಿಂದ ಭವನ ನಿರ್ಮಾಣ ಆರಂಭಗೊಂಡಿದೆ. ಸಕಾರಾತ್ಮಕ ಶಕ್ತಿ, ದೈವತ ಮತ್ತು ಈಶ್ವರೀಯ ಶಕ್ತಿಯನ್ನು ಹೆಚ್ಚಿಸುವುದು ಅತ್ಯಗತ್ಯವಾಗಿದೆ. ಬೆಳಗಾವಿಯಲ್ಲಿ 12 ಕೇಂದ್ರಗಳು ಸಕ್ರಿಯವಾಗಿವೆ. ಎಲ್ಲೆಡೆ ಆತ್ಮದ ದೀಪವನ್ನು ಪ್ರಜ್ವಲಿಸಿ, ಸತ್ಯ ಜ್ಞಾನವನ್ನು ಪಸರಿಸುವ ಅವಶ್ಯಕತೆಯಿದೆ ಎಂದರು.
ಈ ಸಂದರ್ಭದಲ್ಲಿ ಸಹೋದರಿಯರಾದ ಮೀನಾಕ್ಷಿ, ಸುಲೋಚಣಾ, ಆಕಾಂಕ್ಷಾ, ಶೋಭಾ, ಜ್ಯೋತಿ, ರೂಪಾ, ಭಾರತಿ, ಸಹನಾ, ನೀತಾ, ಸಹೋದರರಾದ ದತ್ತಾತ್ರೈಯ, ಮನೋಹರ, ನಾಗಪ್ಪ, ಭರತ ಇನ್ನುಳಿದವರು ಉಪಸ್ಥಿತರಿದ್ಧರು.
Laxmi News 24×7