Breaking News

ದೇಣಿಗೆ ಕೊಡಿಸುವ ನೆಪದಲ್ಲಿ ವಂಚನೆ: ಎರಡು ದಿನದಲ್ಲೇ 2 ಕೋಟಿ ರೂ ಪಂಗನಾಮ

Spread the love

ಬಾಗಲಕೋಟೆ, ನವೆಂಬರ್​ 20: ದೇಣಿಗೆ ಕೊಡಿಸುವ ನೆಪದಲ್ಲಿ ನಗರದ ಅದೊಂದು ಎನ್‌ಜಿಓಗೆ (NGO) ಕೊಟ್ಯಂತರ ರೂ ವಂಚಿಸಿರುವುದು ಬೆಳಿಕಿಗೆ ಬಂದಿದೆ. ಅಂತರರಾಜ್ಯ ವಂಚಕರಿಂದ ಕೇವಲ ಎರಡೇ ದಿನದಲ್ಲಿ ಬರೋಬ್ಬರಿ 2 ಕೋಟಿ ರೂ.ಗೂ ಅಧಿಕ ಹಣ ವಂಚಿಸಲಾಗಿದೆ (Fraud). ಸಿಎಸ್ಆರ್ ದೇಣಿಗೆ ಹೆಸರಲ್ಲಿ ವಂಚಿಸಲಾಗಿದೆ. ಸದ್ಯ ಬಾಗಲಕೋಟೆ ಸಿಇಎನ್ ಪೋಲಿಸ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆದಿದೆ.

ಹಣ ನೆರವು ಕೋರಿದ್ದೇ ಮುಳುವಾಯ್ತಾ?

ಬಾಗಲಕೋಟೆ ‌ಜಿಲ್ಲೆಯ ಜಮಖಂಡಿ ಮೂಲದ ಜಯಭಾರತ ಮಾತೆ ನಗರ ಹಾಗೂ ಗ್ರಾಮೀಣ ಸೇವಾಸಂಸ್ಥೆ. ಬಾಗಲಕೋಟೆ, ವಿಜಯಪುರ, ಬೆಳಗಾವಿ, ಗದಗ ಜಿಲ್ಲೆಯಲ್ಲಿ ವೃದ್ದಾಶ್ರಮ ಹಾಗೂ ನಿರ್ಗತಿಕ ಕೇಂದ್ರಗಳನ್ನು ‌ಈ ಸಂಸ್ಥೆ ನಡೆಸುತ್ತದೆ. ಇದಕ್ಕಾಗಿ ವಿವಿಧ ದಾನಿಗಳಿಂದ ಸಹಾಯ‌ ನಿರೀಕ್ಷಿಸಿದ್ದರು. ಕಂಪನಿಗಳಿಂದ ಸಿಎಸ್​​ಆರ್ ಫಂಡ್​ನಿಂದ ಹಣ ನೆರವು ಕೋರಿದ್ದರು. ಈ ಬಗ್ಗೆ ಸಾಮಾಜಿಕ‌ ಜಾಲತಾಣದಲ್ಲೂ ‌ಮನವಿ‌ ಮಾಡಿದ್ದರು.

ಇದನ್ನು ಗಮನಿಸಿದ ಅಸ್ಸಾಂನ ಸುರ್ಜಿತ್ ಮತ್ತು ಸಿದ್ದಾರ್ಥ ಹಾಗೂ ಪಶ್ಚಿಮ ಬಂಗಾಳದ ಮಾನಷ್ ಗೋಷ್ ಜಯ ಭಾರತ ಮಾತೆ NGO ಕಾರ್ಯದರ್ಶಿ ಶಶಾಂಕ್‌ ಒಳವಾಡೆಯವರನ್ನು ಸಂಪರ್ಕಿಸಿದ್ದಾರೆ. ನಾವು ಫಂಡ್​ ಕೊಡುತ್ತೇವೆ. ವಿವಿಧ ಕಂಪನಿಗಳಿಂದಲೂ ಫಂಡ್‌ ಕೊಡಿಸುತ್ತೇವೆ ಅಂತ ನಂಬಿಸಿದ್ದಾರೆ.

ಶಶಾಂಕ್‌ ಅವರ ಮೊಬೈಲ್ ಪಡೆದು ಅದರಲ್ಲಿ ಓಟಿಪಿ ಆ್ಯಪ್ ಹಾಕಿ, ಇವರ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ 2,01,26,092 ರೂ ವಂಚಿಸಿದ್ದಾರೆ. ಜೂನ್ 18 ಮತ್ತು 19ರಂದು ಈ ಮೊತ್ತವನ್ನು ವಿವಿಧ ಖಾತೆಗೆ ಶಶಾಂಕ್‌ ಖಾತೆಯಿಂದ ವರ್ಗಾವಣೆ ಮಾಡಿ‌ ನಾಮ‌ ಹಾಕಿದ್ದಾರೆ. ಈ ಬಗ್ಗೆ ಶಶಾಂಕಕುಮಾರ್ ಒಳವಾಡೆ ಬಾಗಲಕೋಟೆ ಸಿಇಎನ್ ಪೋಲಿಸ ಠಾಣೆಗೆ ದೂರು ನೀಡಿದ್ದಾರೆ.

ಬಾಗಲಕೋಟೆ, ಬೆಳಗಾವಿ, ವಿಜಯಪುರ, ಗದಗ ಜಿಲ್ಲೆಗಳಲ್ಲಿ ವೃದ್ದಾಶ್ರಮ, ನಿರ್ಗತಿಕ ವಸತಿ ಕೇಂದ್ರ ನಡೆಸುತ್ತಿದ್ದ ಶಶಾಂಕಕುಮಾರ್, ವಿವಿಧ ಕಂಪನಿಗಳಿಂದ ಸಿಎಸ್ಆರ್ ಫಂಡ್​ಗಾಗಿ ಆನಲೈನ್ ನಲ್ಲಿ ಸಂಪರ್ಕ ಮಾಡುತ್ತಿದ್ದರು. ಮಾಹಿತಿ ಕಂಡು ಜೂನ್ ತಿಂಗಳಲ್ಲಿ ಜಮಖಂಡಿಗೆ ವಂಚಕರು ಆಗಮಿಸಿದ್ದರು. ತಾವು ಸೇರಿದಂತೆ ವಿವಿಧ ಕಂಪನಿಗಳಿಂದ ದೇಣಿಗೆ ಕೊಡಿಸುವ ನಾಟಕ ಕೂಡ ಆಡಿದ್ದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ