Breaking News

ಕೊಪ್ಪರಿಗೆ ಏರುವುದರೊಂದಿಗೆ ಕುಕ್ಕೆ ಚಂಪಾಷಷ್ಠಿ ವಾರ್ಷಿಕ ಜಾತ್ರೆ ಆರಂಭ: ನ.26ರಂದು ಮಹಾರಥೋತ್ಸವ

Spread the love

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವಾರ್ಷಿಕ ಚಂಪಾಷಷ್ಠಿ ಜಾತ್ರೋತ್ಸವವು ಕಾರ್ತಿಕ ಬಹುಳ ದ್ವಾದಶಿಯ ಪವಿತ್ರ ದಿನವಾದ ಇಂದು (ನ.16) ಬೆಳಗ್ಗೆ 8.10ಕ್ಕೆ ವೃಶ್ಚಿಕ ಲಗ್ನ ಸುಮಹೂರ್ತದಲ್ಲಿ ಕೊಪ್ಪರಿಗೆ ಏರುವ ಆಚರಣೆಯೊಂದಿಗೆ ಆರಂಭವಾಗಿದೆ. ನವೆಂಬರ್ 26ರಂದು ಬೆಳಗಿನಜಾವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಪ್ರಸಿದ್ಧ ಚಂಪಾಷಷ್ಠಿ ಮಹಾರಥೋತ್ಸವ ಜರುಗಲಿದೆ.

ಪ್ರತಿ ವರ್ಷವೂ ಕೊಪ್ಪರಿಗೆ ಏರುವ ಮೂಲಕ ಜಾತ್ರೆ ಆರಂಭವಾಗುವುದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ವೈಶಿಷ್ಟ್ಯ. ಸಾಮಾನ್ಯವಾಗಿ ಅನೇಕ ದೇವಸ್ಥಾನಗಳಲ್ಲಿ ಧ್ವಜಾರೋಹಣ (ಕೊಡಿ ಏರಿಕೆ)ದ ಮೂಲಕ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಆದರೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಶತಮಾನಗಳ ಸಂಪ್ರದಾಯವಾದ ಅನ್ನದ ಕೊಪ್ಪರಿಗೆ ಏರಿಸುವುದೇ ಜಾತ್ರೆಯ ಆರಂಭ. ದೇವಳದ ಒಳಾಂಗಣದಲ್ಲಿ ಇರುವ ಎರಡು ದೊಡ್ಡ ಒಲೆಗಳ ಮೇಲೆ ರಾಮ – ಲಕ್ಷ್ಮಣ ಎಂಬ ಜೋಡಿ ಕೊಪ್ಪರಿಗೆಗಳನ್ನು ಏರಿಸಲಾಗುತ್ತದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ