5 ವರ್ಷ ಸಿದ್ಧರಾಮಯ್ಯನವರೇ ಸಿಎಂ ಆಗಿರ್ತಾರೆ…ಸಿದ್ಧು ಪರ ಬ್ಯಾಟ್ ಬೀಸಿದ ಸಚಿವ ಸತೀಶ್ ಜಾರಕಿಹೊಳಿ
5 ವರ್ಷ ಸಿದ್ಧರಾಮಯ್ಯನವರೇ ಸಿಎಂ ಆಗಿರ್ತಾರೆ…
ಸಿದ್ಧು ಪರ ಬ್ಯಾಟ್ ಬೀಸಿದ ಸಚಿವ ಸತೀಶ್ ಜಾರಕಿಹೊಳಿ
ಕೆಲಸಕ್ಕಾಗಿ ಸಚಿವರು ದೆಹಲಿಗೆ ಹೋಗಿ ಬರ್ತಾರೆ
ಸಂಪುಟ ಪುನಾರಚನೆ ಬಗ್ಗೆ ನಮ್ಮ ಜೊತೆ ಮಾತನಾಡಲ್ಲ
ಸಿಎಂ ಸಿದ್ದರಾಮಯ್ಯನವರು ಗಟ್ಟಿಯಾಗಿದ್ದಾರೆ. ಐದು ವರ್ಷಗಳ ಕಾಲ ಸಿಎಂ ಆಗಿರುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಅವರೇ ಇರ್ತಾರೆ ಎನ್ನುವ ಮೂಲಕ ಸಿದ್ದು ಪರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಬ್ಯಾಟ್ ಬಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಪುಟ ಪುನರ್ ರಚನೆ ಹೈಕಮಾಂಡ್ ಗೆ ಬಿಟ್ಟ ವಿಚಾರ. ದೆಹಲಿಗೆ ಹೋಗೋದು ಬರೋದು ಸಚಿವರಿಗೆ ಕೆಲಸ ಇರ್ತಾವೆ ಅದಕ್ಕೆ ಹೋಗಿ ಬರ್ತಾ ಇರ್ತಿವಿ ಎಂದ ಅವರು, ಸಂಪುಟ ಪುನರ್ ರಚನೆ ಬಗ್ಗೆ ನಮ್ಮ ಜೊತೆ ಚರ್ಚೆ ಮಾಡೋದಿಲ್ಲ.ಅದರ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕು. ಸಂಪುಟ ಪುನರ್ ರಚನೆಯಾದ್ರೆ ಇನ್ನು ಎರಡು ಸ್ಥಾನವನ್ನು ವಾಲ್ಮೀಕಿ ಸಮಾಜಕ್ಕೆ ಕೇಳಿದ್ದೇವೆ.ಈ ಬಾರಿ ಕೊಡಲೇ ಬೇಕು ನಮ್ಮ ಸಮುದಾಯದವರಿಗೆ ಒಳ್ಳೇದಾಗುತ್ತೆ. ನಮ್ಮ ಸಮಾಜದಲ್ಲಿ ಯಾರಿಗಾದ್ರು ಒಳ್ಳೇದು ಇವರಿಗೆ ಕೊಡಿ ಎಂದು ಡಿಮ್ಯಾಡ್ ಮಾಡೋದಿಲ್ಲ ಎಂದರು.
ಕರ್ನಾಟಕದಲ್ಲಿ ಅಹಿಂದಕ್ಕೆ ಹೆಚ್ಚು ಮಹತ್ವ ಇದೆ. ಬಿಹಾರದಲ್ಲಿ ಎಲ್ಲಾರನ್ನು ಒಗ್ಗೂಡಿಸಲು ಸಾಧ್ಯವಿಲ್ಲ.ಕರ್ನಾಟಕದಲ್ಲಿ ಎಲ್ಲಾ ಅಹಿಂದ ವರ್ಗವನ್ನು ಒಗ್ಗೂಡಿಸಲು ಸಾಧ್ಯವಿದೆ.
ಬಿಹಾರ ಚುನಾವಣೆ ಫಲಿತಾಂಶ ಗೆದ್ದರು ಚರ್ಚೆಯಾಗಬೇಕು ಸೋತರೂ ಚರ್ಚೆಯಾಗಬೇಕು.ನಾವು ಏಕೆ ಸೋತ್ವಿ ಎಂದು ಪ್ರಮುಖವಾಗಿ ಚರ್ಚೆಯಾಗಬೇಕು. ಬಿಹಾರದಲ್ಲಿ ನಮ್ಮ ಗ್ಯಾರೆಂಟಿ ಇರಲಿಲ್ಲ ಅವರ ಗ್ಯಾರೆಂಟಿ ಘೋಷಣೆ ಮಾಡಿ ಸಕ್ಸಸ್ ಆದರು. ಓಟ್ ಚೋರಿ ಬಗ್ಗೆ ನಮ್ಮ ವರೀಷ್ಠರು ತೀರ್ಮಾನ ಮಾಡ್ತಾರೆ ಮುಂದೆ ಏನ್ ಆಗುತ್ತೋ ಕಾಯಬೇಕಿದೆ ಎಂದರು.
ಕಿತ್ತೂರು ರಾಣಿ ಚನ್ನಮ್ಮ ಮೃಗಾಲಯದಲ್ಲಿ ಕೃಷ್ಣ ಮೃಗಗಳು ಸಾವನ್ನಪ್ಪಿದ ಪ್ರಕರಣಕ್ಕೆ ಮಾತನಾಡಿ,ಅದು ನಮ್ಮ ಕ್ಷೇತ್ರದಲ್ಲಿ ಬರುತ್ತದೆ ಏನ್ ಆಗಿದೆ ಎನ್ನುವುದು ನೋಡಬೇಕು, ರೋಗ ಬಂದಿದೆನಾ, ಅಥವಾ ಚಿಕಿತ್ಸೆ ಸಿಕ್ಕಿಲ್ವ ಎಂದು ಪರಿಶೀಲನೆ ನಡೆಸಬೇಕೆಂದರು.
Laxmi News 24×7