ಬೆಂಗಳೂರು, (ನವೆಂಬರ್ 14): ಪ್ರಧಾನಿ ನರೇಂದ್ರ ಮೋದಿ ಹಾಗೂ ನಿತೀಶ್ ಕುಮಾರ್ ಜುಗಲ್‌ಬಂಧಿ ಬಿಹಾರದಲ್ಲಿ ಮಹಾಘಟಬಂಧನ್ನನ್ನೇ ವೈಟ್‌ವಾಷ್ ಮಾಡಿದೆ. ಬಿಹಾರದಲ್ಲಿ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದ್ರೆ, ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಅತ್ಯುತ್ತಮ ಪ್ರದರ್ಶನ ನೀಡಿದೆ. ಇತ್ತ ಬಿಹಾರದ ಫಲಿತಾಂಶದ ಬಳಿಕ ರಾಜ್ಯ ಕಾಂಗ್ರೆಸ್ನ ಮೇಲು ಕರ್ನಾಟಕದ ಕಾಂಗ್ರೆಸ್ ನಾಯಕತ್ವದ ಮೇಲು ಅದರ ಪರಿಣಾಮ ಬೀರಬಹುದು ಎಂಬ ಚರ್ಚೆಗಳು ಜೋರಾಗಿ ನಡೆದಿತ್ತು. ಆದರೆ ಎಲ್ಲ ಚರ್ಚೆಗಳಿಗೂ ಇತಿಶ್ರೀ ಹಾಕಿ ಬಿಹಾರದ ಫಲಿತಾಂಶ ಬೇರೆ ಇದೆ ಕಥೆ ಹೇಳುತ್ತಿದೆ.ಹೌದು.. ರಾಜ್ಯ ರಾಜಕಾರಣದಲ್ಲಿ ಬಿಹಾರ ಫಲಿತಾಂಶದ ಪರಿಣಾಮದ ಚರ್ಚೆ ಗರಿಗೆದರಿದೆ. ಅದರಲ್ಲೂ ಕೈ ಮನೆಯಲ್ಲಿನ ಕ್ರಾಂತಿ ಬೆಳವಣಿಗೆಗೆ ಬಿಹಾರ ಫಲಿತಾಂಶವನ್ನ ತಳಕು ಹಾಕುತ್ತಿರುವುದು ಮತ್ತೊಂದು ಕುತೂಹಲ. ವಿಷಯ ಏನಂದ್ರೆ, ಬಿಹಾರದಲ್ಲಿ ಕಾಂಗ್ರೆಸ್ನ ಮಹಾಘಟಬಂಧನ ಗೆದ್ದಿದ್ರೆ ಹೈಕಮಾಂಡ್ಗೆ ಹೊಸ ಎನರ್ಜಿ ಬರ್ತಿತ್ತು. ಇದೇ ಎನರ್ಜಿಯಲ್ಲಿ ವರಿಷ್ಠರು ಕರ್ನಾಟಕದಲ್ಲೂ ಸಹ ಹೊಸ ಪ್ರಯೋಗ ಮಾಡುತ್ತಿದ್ದರು ಎನ್ನುವ ಮಾತು ಇತ್ತು. ಆದ್ರೆ, ಇದೀಗ ಬಿಹಾರ ಫಲಿತಾಂಶ ಉಲ್ಟಾ ಹೊಡೆದಿದೆ.
Laxmi News 24×7