Breaking News

ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಅಧಿವೇಶನಕ್ಕೆ ಎಲ್ಲರೂ ಸಹಕಾರ ನೀಡಿ; ಸಭಾಪತಿ ಯು.ಟಿ. ಖಾದರ್

Spread the love

ಡಿಸೆಂಬರ್ 8 ರಿಂದ 19 ರ ವರೆಗೆ ಚಳಿಗಾಲದ ಅಧಿವೇಶನ
ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಅಧಿವೇಶನಕ್ಕೆ ಎಲ್ಲರೂ ಸಹಕಾರ ನೀಡಿ; ಸಭಾಪತಿ ಯು.ಟಿ. ಖಾದರ್
ಡಿಸೆಂಬರ್ 8 ರಿಂದ 19 ರ ವರೆಗೆ ಚಳಿಗಾಲದ ಅಧಿವೇಶನ
ಉ. ಕ. ನಡೆಯುತ್ತಿರುವ ಅಧಿವೇಶನಕ್ಕೆ ಎಲ್ಲರೂ ಸಹಕಾರ ನೀಡಿ
ಅಧಿವೇಶನವು ಯಶಸ್ವಿಯಾಗಿ ನಡೆಯಲಿದೆ
ಸಭಾಪತಿ ಯು.ಟಿ. ಖಾದರ್ ಹೇಳಿಕೆ
ಬೆಳಗಾವಿ ಸುವರ್ಣ ಸೌಧದಲ್ಲಿ ಡಿಸೆಂಬರ್ 8 ರಿಂದ 19 ರ ವರೆಗೆ ಚಳಿಗಾಲದ ಅಧಿವೇಶನ ನಡೆಯಲಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.
ಬೀದರ್ನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಅಧಿವೇಶನವು ಯಶಸ್ವಿಯಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಧಿವೇಶನವು ಕೇವಲ ಕಾಲಹರಣವಾಗುತ್ತದೆ, ಮೋಜು-ಮಸ್ತಿಗಾಗಿ ಎಂದು ಹಲವು ವರ್ಷಗಳಿಂದ ಕೇಳಿಬರುತ್ತಿರುವ ಆರೋಪಗಳನ್ನು ಸ್ಪೀಕರ್ ತಳ್ಳಿಹಾಕಿದರು. ನಾವು ಸಕಾರಾತ್ಮಕ ಚಿಂತನೆಯಲ್ಲಿ ಇರಬೇಕು.
ಬಹುತೇಕ ಎಲ್ಲ ಶಾಸಕರು ಅಧಿವೇಶನದಲ್ಲಿ ಭಾಗವಹಿಸುತ್ತಾರೆ. ಚರ್ಚೆಗಳು ರಾತ್ರಿ 1, 1:30 ರವರೆಗೂ ನಡೆದಿವೆ ಮತ್ತು ಬಹಳಷ್ಟು ಮಸೂದೆಗಳು ಪಾಸ್ ಆಗಿವೆ ಎಂದು ಸ್ಪೀಕರ್ ಖಾದರ್ ವಿವರಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುತ್ತಿರುವ ಈ ಅಧಿವೇಶನಕ್ಕೆ ಜನಸಾಮಾನ್ಯರು, ಮಾಧ್ಯಮದವರು ಮತ್ತು ಸಂಘ-ಸಂಸ್ಥೆಗಳು ಸಹಕಾರ ನೀಡಬೇಕು.
ಕರ್ನಾಟಕದ ಜನತೆಗೆ ಪ್ರಯೋಜನವಾಗುವಂತಹ ತೀರ್ಮಾನಗಳನ್ನು ತೆಗೆದುಕೊಳ್ಳಲು ಸದನ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಪ್ರತ್ಯೇಕ ರಾಜ್ಯದ ಬೇಡಿಕೆಯ ಕುರಿತು ಕೇಳಿದಾಗ, ಶಾಸಕ ರಾಜು ಕಾಗೆ ಅವರೊಂದಿಗೆ ಈ ಬಗ್ಗೆ ಚರ್ಚಿಸುವುದಾಗಿ ಖಾದರ್ ತಿಳಿಸಿದರು. ಶಾಸಕರು, ಸರ್ಕಾರ ಮತ್ತು ವಿರೋಧ ಪಕ್ಷದವರು ಜನರ ವಿಶ್ವಾಸ ಉಳಿಸಿಕೊಳ್ಳುವ ಜವಾಬ್ದಾರಿ ಇದೆ ಎಂದು ಅವರು ಹೇಳಿದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ