ಕೊಪ್ಪಳ: ಮೈಸೂರು ಭಾಗದಲ್ಲಿ ನಮ್ಮ ನೀರು ನಮ್ಮ ಹಕ್ಕು ಎಂದು ಕಾಂಗ್ರೆಸ್ನವರು ಹೋರಾಟ ಮಾಡಿದ್ದರು. ಟಿಬಿ ಡ್ಯಾಂನಿಂದ ಎರಡನೇ ಬೆಳೆಗೆ ರೈತರಿಗೆ ನೀರು ಬಿಡಲಿಲ್ಲವೆಂದರೆ ನಾವು ಸಹ ನಮ್ಮ ಭಾಗದಲ್ಲಿ ನಮ್ಮ ನೀರು, ನಮ್ಮ ಹಕ್ಕು ಎಂದು ಹೋರಾಟ ಮಾಡ್ತೇವೆ. ಟಿ ಬಿ ಡ್ಯಾಂಗೆ ಮುತ್ತಿಗೆ ಹಾಕುತ್ತೇವೆ. ನೀರು ಬಿಡಲಿಲ್ಲವೆಂದರೆ ಜಲಾಶಯಕ್ಕೆ ಜಿಗಿದು ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ಕೊಪ್ಪಳದ ಮುನಿರಾಬಾದ್ನಲ್ಲಿ ಗುರುವಾರ ಮಾಧ್ಯಮದ ಜೊತೆಗೆ ಅವರು ಮಾತನಾಡಿ, ಟಿ ಬಿ ಡ್ಯಾಂ ಏನು ಡಿ.ಕೆ.ಶಿವಕುಮಾರ್ ಅವರ ತಾತನ ಆಸ್ತಿಯಲ್ಲ. ಎರಡನೇ ಬೆಳೆಗೆ ನೀರು ಕೊಡಲ್ಲ ಅಂದ್ರೆ ನಾವು ಕೈಕಟ್ಟಿ ಕುಳಿತುಕೊಳ್ಳಬೇಕಾ? ಎಂದು ರಾಜ್ಯ ಸರ್ಕಾದರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
Laxmi News 24×7