Breaking News

ವಿಶ್ವ ದಾಖಲೆ ಸೇರಿದ ಮಿಷ್ಠಾನ ನೈವೇದ್ಯ

Spread the love

ಮೈಸೂರು: ಕಷ್ಟ ಭಂಜನ (ಕಷ್ಟನಾಶಕ) ಭೈರವ ದೇವರಿಗೆ 2025ನೇ ವರ್ಷದ ಪ್ರಕಾರದ ಮಿಷ್ಠಾನ ನೈವೇದ್ಯ ಸಮರ್ಪಣೆಯು ವಿಶ್ವ ದಾಖಲೆಯ ಪುಟ ಸೇರಿತು. ನಗರದ ಪುರಭವನ ಆವರಣದಲ್ಲಿ ಭೈರವ ಜನ್ಮಾಷ್ಟಮಿ ಪ್ರಯುಕ್ತ ನವೆಂಬರ್​ 5 ರಿಂದ 12 ರವರೆಗೆ ಕೃಷ್ಣಗಿರಿ ಪೀಠಾಧಿಪತಿ ಶ್ರೀ 1008 ಆಚಾರ್ಯ ವಸಂತ ವಿಜಯಾನಂದ ಗಿರಿಜಿ ಮಹಾರಾಜ್ ಅವರ ಸಾನ್ನಿಧ್ಯದಲ್ಲಿ ಕಷ್ಟ ಭಂಜನ ಭೈರವ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಸಂಜೆ 2025 ಪ್ರಕಾರದ ಮಿಷ್ಠಾನ ನೈವೇದ್ಯ ಸಮರ್ಪಣೆಯ ವಿಶ್ವ ದಾಖಲೆ ಕಾರ್ಯಕ್ರಮ ನೆರವೇರಿಸಲಾಯಿತು.

ಎಲ್ಲರನ್ನೂ ಆಕರ್ಷಿಸಿದ ಸುಮಾರು 2025 ಬಗೆಯ ತಿನಿಸುಗಳು: ನಾನಾ ಹೆಸರಿನ ಸುಮಾರು 2025 ಬಗೆಯ ತಿನಿಸುಗಳು, ಕಾರ್ಯಕ್ರಮದಲ್ಲಿ ಎಲ್ಲರನ್ನೂ ಆಕರ್ಷಿಸಿತು. ಮಧ್ಯಾಹ್ನ ಆಗಮಿಸಿದ ವಿಶ್ವ ದಾಖಲೆಯ ಅಧಿಕಾರಿಗಳ ತಂಡವು, ಸಿದ್ಧಪಡಿಸಿರುವ ಈ ತಿನಿಸುಗಳನ್ನು ಪರಿಶೀಲಿಸಿ ಮತ್ತು ಅಷ್ಟೂ ಬಗೆಯ ತಿನಿಸುಗಳ ಎಣಿಕೆಯನ್ನು ನಡೆಸಿತು. ಆ ಬಳಿಕ ಅದರ ವಿವರವನ್ನು ಪಡೆದು ವಿಶ್ವದಾಖಲೆಯ ಪುಟಗಳಿಗೆ ಸೇರಿಸಿದರು.ಕಾರ್ಯಕ್ರಮದ ಕೊನೆಯ ದಿನವಾದ ಬುಧವಾರ ಬೆಳಗ್ಗೆ 10.30 ರಿಂದ ವಿಶೇಷ ಭೈರವ ಸಾಧನ, ಮಧ್ಯಾಹ್ನ 3.30 ರಿಂದ ಕಷ್ಟ ಭಂಜನ ಮಹಾಯಜ್ಞ ಹಾಗೂ 2025 ವ್ಯಂಜನೆಗಳ ಸಮರ್ಪಿಸಲಾಯಿತು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ