ಬೆಂಗಳೂರು ಸಾಕಾಗಿದೆ, ಯಾರನ್ನು ಇಲ್ಲಿಗೆ ಬನ್ನಿ ಎಂದು ಕರೆಯಬೇಡಿ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೆಡ್ಡಿಟ್ನಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು, ಇದಕ್ಕೊಂದು ಶೀರ್ಷಿಕೆಯನ್ನು ಕೂಡ ನೀಡಿದ್ದಾರೆ.
“ಬೆಂಗಳೂರು ಸಾಕಾಗಿದೆ, ಜನರನ್ನು ಆಹ್ವಾನಿಸುವುದನ್ನು ನಿಲ್ಲಿಸುವ ಸಮಯ ಬಂದಿದೆ. ಮಿತಿ ಮೀರಿ ಬೆಳೆಯುತ್ತಿರುವ ನಗರ, ಹೆಚ್ಚುತ್ತಿರುವ ಬಾಡಿಗೆಗಳು, ಮೂಲಸೌಕರ್ಯದ ಕೊರತೆ, ಅಪರಾಧಗಳು, ಹೀಗೆ ಅನೇಕ ವಿಚಾರಗಳಿಂದ ಬೆಂಗಳೂರು ಬೇಡ ಎನ್ನುವ ನಿರ್ಧಾರಕ್ಕೆ ಬರಬೇಕಾದ ಸ್ಥಿತಿ ಬಂದಿದೆ.”
ಎಂದು ಈ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.ವ್ಯಕ್ತಿಯೊಬ್ಬರು, ಬೆಂಗಳೂರಿನ ಜೀವನ ಸಾಕಾಗಿದೆ ಎನ್ನುವ ಮೂಲಕ ಬಹಳ ಹತಾಶೆ ವ್ಯಕ್ತಪಡಿಸಿದ್ದಾರೆ. “ಒಂದು ಕಾಲದಲ್ಲಿ ಎಲ್ಲರನ್ನು ಆಕರ್ಷಿಸುತ್ತಿದ್ದ, ಹಸಿರಿಗೆ ಹೆಸರುವಾಸಿಯಾಗಿದ್ದ ಬೆಂಗಳೂರು ಇಂದು ಅಧಿಕ ಜನಸಂಖ್ಯೆ ಮತ್ತು ಕಳಪೆ ಯೋಜನೆಯ ಒತ್ತಡದಿಂದ ಹೇಗೆ ಕುಗ್ಗುತ್ತಿದೆ ನೋಡಿ.
ಇಲ್ಲಿನ ಜನ ದಟ್ಟಣೆ, ನೀರಿನ ಕೊರತೆ, ಹೆಚ್ಚುತ್ತಿರುವ ಬಾಡಿಗೆ, ಕಣ್ಮರೆಯಾಗುತ್ತಿರುವ ಮರಗಳು, ಪರಿಪೂರ್ಣವಾದ ಜೀವನ ಕಟ್ಟಿಕೊಳ್ಳುವ ಬದಲು ಜನ ವೇಗವಾಗಿ ಓಡುತ್ತಿದ್ದಾರೆ.” ಎಂದು ರೆಡ್ಡಿಟ್ನಲ್ಲಿ ಬರೆದುಕೊಂಡಿದ್ದು, ಇದೀಗ ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಕಾರಣವಾಗಿದೆ.
Laxmi News 24×7