ಸಾಮಾನ್ಯ ಗ್ರಾಮ ಸಭೆ, ವಾರ್ಡ್ ಸಭೆಗಳ ಮಾಹಿತಿ ಕೇಳಿ ಬೇಸತ್ತ ನಾಗರೀಕರನೋರ್ವ ಉಪವಾಸ ಸತ್ಯಾಗ್ರಹದ ಮಾರ್ಗ ಹಿಡಿದಿದ್ದಾರೆ.
! ಕುಂದಗೋಳ ತಾಲೂಕು ಪಂಚಾಯಿತಿ ಮುಂದೆ ಹೀಗೆ ನೆಲಹಾಸು ಮೇಲೆ ಸಿಎಂ ಸಿದ್ದರಾಮಯ್ಯ, ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ, ಜಿಲ್ಲಾ ಪಂಚಾಯತ್ ಸಿಇಒ ಭುವನೇಶ್ ಪಾಟೀಲ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್ ಕಮ್ಮಾರ್ ಪೋಟೋ ಇಟ್ಟುಕೊಂಡು ಉಪವಾಸ ಸತ್ಯಾಗ್ರಹ ಮಾಡುತ್ತೀರುವ ಇವರು ಮಂಜುನಾಥ ಮೊರಬದ.
ಕುಂದಗೋಳ ತಾಲೂಕು ಪಂಚಾಯಿತಿ ವ್ಯಾಪ್ತಿಯ ಬು.ತರ್ಲಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ 3 ಹಳ್ಳಿ 5 ವಾರ್ಡ್’ಗಳ ಸಾಮಾನ್ಯ ಗ್ರಾಮ ಸಭೆ, ವಾರ್ಡ್ ಸಭೆ ಮಾಹಿತಿ ಕೇಳಿ ಒಂದೂವರೆ ವರ್ಷ ಕಳೆದರೂ ಉತ್ತರ ಸಿಕ್ಕಿಲ್ಲವಂತೆ.
ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಭ್ರಷ್ಟಾಚಾರದ ಆಡಳಿತಕ್ಕೆ ಕ್ರಮ ಕೈಗೊಳ್ಳದೆ ಇರುವ ಅಧಿಕಾರಿಗಳ ವಿರುದ್ಧ ಹಗಲು – ರಾತ್ರಿ ಉಪವಾಸ ಸತ್ಯಾಗ್ರಹದ ಮಾರ್ಗ ಹಿಡಿದಿದ್ದಾರೆ.
Laxmi News 24×7