Breaking News

ಅಪರಿಚಿತ ವಾಹನ ಡಿಕ್ಕಿ: ರಜೆಗೆ ಬಂದಿದ್ದ ಬಾಗಲಕೋಟೆ ಯೋಧ ಸ್ಥಳದಲ್ಲೇ ದುರ್ಮರಣ ಬೈಕ್’ಗೆ ಅಪರಿಚಿತ ವಾಹನ ಡಿಕ್ಕಿ

Spread the love

ಅಪರಿಚಿತ ವಾಹನ ಡಿಕ್ಕಿ: ರಜೆಗೆ ಬಂದಿದ್ದ ಬಾಗಲಕೋಟೆ ಯೋಧ ಸ್ಥಳದಲ್ಲೇ ದುರ್ಮರಣ
ಬೈಕ್’ಗೆ ಅಪರಿಚಿತ ವಾಹನ ಡಿಕ್ಕಿ
ರಜೆಗೆ ಬಂದಿದ್ದ ಯೋಧ ಸ್ಥಳದಲ್ಲೇ ಸಾವು..ಕುಳಗೇರಿ ಕ್ರಾಸ್ ಬಳಿ ಘಟನೆ..
ಹನುಮಂತ ಹಟ್ಟಿ(26) ಮೃತ ಯೋಧ
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ಬಳಿ ನಡೆದ ಭೀಕರ ಅಪಘಾತದಲ್ಲಿ ರಜೆ ಮೇಲೆ ಗ್ರಾಮಕ್ಕೆ ಬಂದಿದ್ದ ಭಾರತೀಯ ಸೇನೆಯ ಯೋಧರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬಾದಾಮಿ ತಾಲ್ಲೂಕಿನ ಸೋಮನಕೊಪ್ಪ ಗ್ರಾಮದ ನಿವಾಸಿ ಹಾಗೂ ಐದು ವರ್ಷಗಳ ಹಿಂದೆ ಸೇನೆಗೆ ಸೇರಿ, RRMEG ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಹನುಮಂತ ಹಟ್ಟಿ (26) ಮೃತಪಟ್ಟ ಯೋಧರಾಗಿದ್ದಾರೆ.
ಹನುಮಂತ ಹಟ್ಟಿ ಅವರು ಪ್ರಯಾಣಿಸುತ್ತಿದ್ದ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಕೆರೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ