Breaking News

ಕಿತ್ತೂರು ಇತಿಹಾಸ ಸಾರುವ ಸಂಗ್ರಹಾಲಯಕ್ಕೆ 1.72 ಲಕ್ಷ ಪ್ರವಾಸಿಗರ ಭೇಟಿ: 17 ಲಕ್ಷ ರೂ. ಪ್ರವೇಶ ಶುಲ್ಕ ಸಂಗ್ರಹ

Spread the love

ಬೆಳಗಾವಿ: ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಅವರ ಅಮೃತಹಸ್ತದಿಂದ ಕಿತ್ತೂರಿನಲ್ಲಿ ಉದ್ಘಾಟನೆಗೊಂಡ “ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸರ್ಕಾರಿ ವಸ್ತು ಸಂಗ್ರಹಾಲಯ”ಕ್ಕೆ ಈಗ 58ರ ಸಂಭ್ರಮ. ಕಿತ್ತೂರು ಕೋಟೆಗೆ ಬರುವವರು ಈ ವಸ್ತು ಸಂಗ್ರಹಾಲಯ ಕಣ್ತುಂಬಿಕೊಳ್ಳುತ್ತಾರೆ. ಕಳೆದ ಎರಡು ವರ್ಷಗಳಲ್ಲಿ 1.72 ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದು, ಪ್ರವಾಸಿಗರಿಂದ 17 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಏನೇನಿದೆ? ಇನ್ನೂ ಏನಾಗಬೇಕಿದೆ? ಎಂಬ ಕುರಿತು ಇಲ್ಲಿದೆ ವಿಶೇಷ ವರದಿ.

Kittur Rani Chennamma Museum

ಕಿತ್ತೂರಿನ ಕೋಟೆ ಆವರಣದಲ್ಲಿ ನಿರ್ಮಿಸಿರುವ “ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸರ್ಕಾರಿ ವಸ್ತು ಸಂಗ್ರಹಾಲಯ” ಕಿತ್ತೂರು ಸಂಸ್ಥಾನದ ಗತವೈಭವವನ್ನು ಹಿಡಿದಿಟ್ಟುಕೊಂಡಿದೆ. 1967 ಜನವರಿ 10ರಂದು ಅಂದಿನ‌ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರೇ ಸ್ವತಃ ಕಿತ್ತೂರಿಗೆ ಆಗಮಿಸಿ ಲೋಕಾರ್ಪಣೆಗೊಳಿಸಿರುವ ಈ ವಸ್ತು ಸಂಗ್ರಹಾಲಯವನ್ನು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ವಹಣೆ ಮಾಡುತ್ತಿದೆ.Kittur Rani Chennamma Museum

ಈ‌ ಮೊದಲು ಸಂಗ್ರಹಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಯಾವುದೇ ಶುಲ್ಕ ಇರಲಿಲ್ಲ. ಕಳೆದ ಎರಡು ವರ್ಷಗಳಿಂದ ಪ್ರವೇಶ ಶುಲ್ಕ‌ ನಿಗದಿಪಡಿಸಲಾಗಿದ್ದು, ಮಕ್ಕಳಿಗೆ 5 ರೂ., ವಯಸ್ಕರಿಗೆ 10 ರೂ. ಇರುತ್ತದೆ. 2023 ಆಗಸ್ಟ್ 3ರಿಂದ 2025 ಆಗಸ್ಟ್ 31ರವರೆಗೆ ಒಟ್ಟು 1,72,223 ಪ್ರವಾಸಿಗರು ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದಾರೆ. ಪ್ರವೇಶ ಶುಲ್ಕದಿಂದ ಬರೊಬ್ಬರಿ 17,33,855 ರೂ.ಸಂಗ್ರಹವಾಗಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ