Breaking News

ಬೆದರಿಕೆ ಕರೆಗಳಿಗೆ ಹೆದರುವುದಿಲ್ಲ, ಪ್ರಿಯಾಂಕ್​ ಖರ್ಗೆ ಜೊತೆ ಕಾಂಗ್ರೆಸ್ ಪಕ್ಷವಿದೆ: ಸಚಿವ ಸಂತೋಷ ಲಾಡ್

Spread the love

ರಾಯಚೂರು: ಬೆದರಿಕೆ ಕರೆಗಳಿಗೆ ನಾವ್ಯಾರು ಹೆದರುವುದಿಲ್ಲ. ಸಚಿವ ಪ್ರಿಯಾಂಕ್​ ಖರ್ಗೆ ಅವರ ಜೊತೆಗೆ ಇಡೀ ಕಾಂಗ್ರೆಸ್ ಪಕ್ಷವಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಭಾರತದಲ್ಲಿರುವ ಎಲ್ಲಾ ಓರಿಜಿನಲ್ ಹಿಂದೂಗಳು ಅವರ ಹಿಂದೆ ಇದ್ದೇವೆ. ಐಡಿಯಾಲಜಿ ವ್ಯತ್ಯಾಸಗಳು ಇರಬಹುದು. ಆದರೆ ಬೆದರಿಕೆ ಹಾಕೋದು ಯಾಕೆ ಮಾಡ್ತಾರೋ, ಯಾರು ಮಾಡಿದ್ದಾರೋ ಗೊತ್ತಿಲ್ಲ” ಎಂದರು.

ಆರ್​ಎಸ್ಎಸ್ ಅನ್ನು ಹಿಂದೆ ಬ್ಯಾನ್ ಮಾಡಿದ್ದು ಯಾರು? ಇವರು ಸ್ಟ್ಯಾಚ್ಯು ಮಾಡಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೇ ಬ್ಯಾನ್ ಮಾಡಿದ್ರು. ಯಾಕೆ ಬ್ಯಾನ್ ಮಾಡಿದ್ರು? ನಮ್ಮ ಕಡೆ ಬೊಟ್ಟು ಮಾಡಿ ಬೈದು ಹೆದರಿಸಲು ಬಂದ್ರೆ ನಾವೇನು ಹೆದರಲ್ಲ” ಎಂದು ತಿರುಗೇಟು ನೀಡಿದರು.

“ಆರ್​ಎಸ್​ಎಸ್ ವಿರುದ್ದವಾಗಿ ನಾನು ಅವಹೇಳನಕಾರಿ ಹೇಳಿಕೆ ಕೊಟ್ಟಿಲ್ಲ.‌ ನಾನು ವಿಚಾರ ದೃಷ್ಟಿಯಿಂದ ಮಾತನಾಡುತ್ತೇನೆ. ಯಾವತ್ತು ವೈಯಕ್ತಿಕವಾಗಿ ಮಾತನಾಡಿಲ್ಲ, ಮುಂದೆಯೂ ಮಾತನಾಡಲ್ಲ‌. ಇಷ್ಟು ದಿನ ಎಲ್ಲಿಯಾದ್ರೂ ನಾನು ತಪ್ಪು ಮಾತನಾಡಿದ್ರೆ ತೋರಿಸಲಿ. ಈಗ ಪ್ರಿಯಾಂಕ್​ ಖರ್ಗೆಯವರಿಗೆ ಜೀವ ಬೆದರಿಕೆ ಬರುತ್ತಿದೆ. ಹೆದರಿಕೊಳ್ಳುವ ಅವಶ್ಯಕತೆಯಿಲ್ಲ. ಭಾರತದಲ್ಲಿರುವ ಕಾಂಗ್ರೆಸ್, ಹಿಂದೂ, ಮುಸ್ಲಿಂ, ಸಿಖ್​, ಎಲ್ಲರೂ ಅವರ ಜೊತೆ ಇದ್ದೇವೆ. ಬೇರೆ ಯಾವ ಸಚಿವರಿಗೂ ಬೆದರಿಕೆ ಬಂದಿಲ್ಲ” ಎಂದು ಸ್ಪಷ್ಟನೆ ನೀಡಿದರು.

ಸಚಿವ ಸಂಪುಟ ವಿಸ್ತರಣೆ ಪಕ್ಷಕ್ಕೆ ಬಿಟ್ಟ ವಿಚಾರ. ಯಾವ ಮಾನದಂಡಗಳನ್ನು ಹಾಕ್ತಾರೆ ಅನ್ನೋದು ಪಕ್ಷಕ್ಕೆ ಬಿಟ್ಟ ವಿಚಾರ.‌ ಸಿಎಂ ಡಿನ್ನರ್ ಪಾರ್ಟಿಯಲ್ಲಿ ವಿಶೇಷವಾಗಿ ಗ್ರಾಪಂ, ತಾಪಂ, ಗ್ರೇಟರ್ ಬೆಂಗಳೂರು ಬಗ್ಗೆ ಚರ್ಚೆಯಾಯ್ತು. ಬೆಂಗಳೂರಿನಲ್ಲಿ ಗುಂಡಿಗಳು ಇರುವುದು ನಿಜ.‌ ಅದನ್ನು ಸಿಎಂ, ಡಿಸಿಎಂ ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ.‌ ಈಗಾಗಲೇ ಗುಂಡಿಗಳನ್ನು ಮುಚ್ಚುವ ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದರು.

ಮೇಕ್ ಇನ್ ಇಂಡಿಯಾ ಏನಾಯ್ತು? ಒಂದು ಗುಂಡು ಪಿನ್ ಮಾಡಿಲ್ಲ ಪುಣ್ಯಾತ್ಮ.‌ 99% ವಸ್ತು ಬರೋದು ಚೈನಾದಿಂದ. ಛತ್ರಿ, ಪಟಾಕಿ ಬರೋದು ಅಲ್ಲಿಂದಲೇ, 11 ವರ್ಷ ಯಾವುದೇ ಸಮರ್ಪಕ ಚರ್ಚೆ ಆಗಲಿಲ್ಲ. ‌ದಿನ ಬೆಳಗಾದರೆ ಕಾಂಗ್ರೆಸ್​ಗೆ ತಾಲಿಬಾನ್ ಅಂತ ಬೈತಿದ್ರು. ಇವತ್ತು ಅವರೇ ಪ್ರೊಟೊಕಾಲ್​ನಲ್ಲಿ ಕರೆದುಕೊಂಡು ಬಂದು ಯುಪಿನಲ್ಲಿ ಗಾರ್ಡ್ ಆಫ್​ ಆನರ್ ಮಾಡಿದ್ದಾರೆ. ಇವತ್ತು ನಿಮಗೆ ಪಾಕಿಸ್ತಾನವನ್ನು ಹಿಡಿಯಲು ಅಫ್ಘಾನಿಸ್ತಾನ ಬೇಕಾ? ಪ್ರಧಾನಮಂತ್ರಿ ಅದನ್ನು ಗಟ್ಟಿಯಾಗಿ ಹೇಳಲಿ. ಪಹಲ್ಗಾಮ್ ದಾಳಿ ಆದ ಮೇಲೆ ಪಾಕ್ ಜೊತೆ ಮ್ಯಾಚ್ ಯಾಕೆ ಆಡಬೇಕಿತ್ತು? ಎಂದು ಪ್ರಶ್ನಿಸಿದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ