Breaking News

ಅಂಧ ವಿದ್ಯಾರ್ಥಿನಿ ಗೌರಮ್ಮ ಈ ಅಂಧ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಸಣ್ಣ ಸಹಾಯ ಮಾಡಿ

Spread the love

ರಾಣೆಬೆನ್ನೂರು – ರಾಣೇಬೆನ್ನೂರು ನಗರದ ಅಂಧರ ಜೀವ ಬೆಳಕು ಸಂಸ್ಥೆಯ
ಅಂಧ ವಿದ್ಯಾರ್ಥಿನಿ ಗೌರಮ್ಮ ಬಾರಕೇರ ಇಲ್ಲಿನ ಸರಕಾರಿ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಇತ್ತೀಚಿಗೆ ಜರುಗಿದ ಪದವಿ ಪರೀಕ್ಷೆಯಲ್ಲಿ ಶೇ.80 ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾಳೆ.
ಮೂಲತಃ ಬೀಳಗಿ ತಾಲೂಕು ಯರಕಲ್ ನವಳಾದ ಈ ವಿದ್ಯಾರ್ಥಿನಿ ಈಚೆಗೆ ತನ್ನ ತಾಯಿಯನ್ನೂ ಕಳೆದುಕೊಂಡಿದ್ದಾಳೆ. ಓದಿನಲ್ಲಿ ತುಂಬಾ ಆಸಕ್ತಿ ಹೊಂದಿರುವ ಈಕೆ ಆರ್ಥಿಕವಾಗಿ ಕಷ್ಟದಲ್ಲಿದ್ದಾಳೆ.  ಪ್ರಸ್ತುತ ಕರ್ನಾಟಕ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ (ಎಂಎ) ಸಮಾಜಶಾಸ್ತ್ರ ವಿಭಾಗಕ್ಕೆ ಪ್ರವೇಶ ಪಡೆದುಕೊಂಡಿದ್ದಾಳೆ.
ಧಾರವಾಡದ ಅಕ್ಕಮಹಾದೇವಿ ವಸತಿನಿಲಯಕ್ಕೆ ಗೌರಮ್ಮ ಆಯ್ಕೆಯಾಗಿದ್ದು ಅದರ ದಾಖಲಾತಿಗಾಗಿ 20,000 ರೂಪಾಯಿ ತುಂಬಬೇಕಿದೆ. ಆದರೆ ಈ ಹಣವನ್ನು ಕಟ್ಟಲು ಆಕೆಯಿಂದ ಸಾಧ್ಯವಾಗುತ್ತಿಲ್ಲ. ಡಿಸೆಂಬರ್ 30 ಹಾಸ್ಟೆಲ್ ಪ್ರವೇಶಕ್ಕೆ ಅಂತಿಮ ದಿನ. ಹಾಗಾಗಿ ಆರ್ಥಿಕ ನೆರವು ನೀಡಿ ತನ್ನ ಬಾಳಿನಲ್ಲಿ ಬೆಳಕಾಗುವಂತೆ ವಿದ್ಯಾರ್ಥಿನಿ ವಿನಂತಿಸಿಕೊಂಡಿದ್ದಾಳೆ.
ನೆರವು ನೀಡಲು ಖಾತೆ ನಂ.: 0568108039967, ಹೆಸರು – Naganagowda D. Belolli, ಕೆನರಾ ಬ್ಯಾಂಕ್, ರಾಣೇಬೆನ್ನೂರ ಶಾಖೆ, IFSC: CNRB0000568.
ಹೆಚ್ಚಿನ ಮಾಹಿತಿಗೆ ಗೌರಿ ಅವರ ಪೊ.ನಂ. 9891378951.
ರಾಣೇಬೆನ್ನೂರು ಅಂಧರ ಜೀವ ಬೆಳಕು ಸಂಸ್ಥೆಯ ನಾಗನಗೌಡ ಅವರ ನಂಬರ್ – 9535951112.

Spread the love

About Laxminews 24x7

Check Also

ತೀರ್ಥಹಳ್ಳಿಯ ಮಹಿಷಿಯ ಉತ್ತರಾದಿ ಮಠದಲ್ಲಿ ಕಳ್ಳತನ – ಕೆಲವೇ ಗಂಟೆಯಲ್ಲಿ 1 ಕೋಟಿ ಮೌಲ್ಯದ ಚಿನ್ನದ 16 ಹಲಗಾರತಿ ವಶಕ್ಕೆ

Spread the loveಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಹಿಷಿಯ ಉತ್ತರಾದಿ ಮಠದಲ್ಲಿ ನಡೆದ ಕಳ್ಳತನ ಪ್ರಕರಣವನ್ನ ಕೆಲವೇ ಗಂಟೆಯಲ್ಲಿ ಬೇಧಿಸುವಲ್ಲಿ ತೀರ್ಥಹಳ್ಳಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ