ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ
ಕೊಳವಿ ಗ್ರಾಮದ ನಮ್ಮೂರ ಸರಕಾರಿ ಹಿರಿಯ ಕನ್ನಡ ಶಾಲೆಯ ಶತಮಾನೋತ್ಸವದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ ಸಚಿವರು
ಗೋಕಾಕ: ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸುವ ಕಾರ್ಯವನ್ನು ಮಾಡಬೇಕು, ಭವಿಷ್ಯತ್ತಿನಲ್ಲಿ ಅದೇ ಶಿಕ್ಷಣ ದೀಪವಾಗಿ ಬೆಳಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಜನರು ಮಧ್ಯ ಸಮನ್ವಯತೆ ಸಹಕಾರದಿಂದ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು.
ತಾಲೂಕಿನ ಕೊಳವಿ ಗ್ರಾಮದ ನಮ್ಮೂರ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶತಮಾನೋತ್ಸವದ ಕಾರ್ಯಕ್ರಮಗಳು ಎಲ್ಲಾ ಗ್ರಾಮಗಳಲ್ಲಿ ನಡೆದಾಗ ಮಾತ್ರ ಗ್ರಾಮೀಣ ಪ್ರದೇಶ ಶೈಕ್ಷಣಿಕ ಉನ್ನತ್ತಿಗೆ ಸಾಕಷ್ಟು ಉತ್ತೇಜನ ದೊರಯುತ್ತದೆ. ಆದರಿಂದ ಗ್ರಾಮೀಣ ಪ್ರದೇಶದ ಜನರು ಈ ದಿಶೆಯಲ್ಲಿ ಶತಾಯಗತಾಯವಾಗಿ ಶ್ರಮಿಸಬೇಕು ಎಂದು ಮನವಿ ಮಾಡಿಕೊಂಡರು.
ಸರಕಾರಿ ಶಾಲೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಇರುವುದು ಅಲ್ಲಿನ ಶಿಕ್ಷಕರಿಗೆ, ಪೋಷಕರಿಗೆ, ಹಳೆಯ ವಿದ್ಯಾಥಿಗಳಿಗೆ ಮತ್ತು ಆ ಊರಿನ ಗ್ರಾಮಸ್ಥರಿಗೆ. ನಮ್ಮೂರ ಸರಕಾರಿ ಶಾಲೆಗಳು ಬೆಳೆಬೇಕು ಎಂದು ಅಭಿಪ್ರಾಯ ವ್ಯಕ್ತಪಡಸಿದರು.
ಸತೀಶ ಜಾರಕಿಹೊಳಿ ಪೌಂಢೇಶದಿಂದ ಜಿಲ್ಲೆಯ ವಿವಿಧ ಶಾಲೆಗಳಿಗೆ ಸುಮಾರು 5 ಲಕ್ಷ ಡೆಕ್ಸ್ ನೀಡಲಾಗಿದೆ. ಜೊತೆಗೆ ಮಕ್ಕಳ ಅನುಕೂಲಕ್ಕಾಗಿ ಕುರ್ಚಿಗಳನ್ನು ನೀಡಲಾಗಿದೆ. ನೂರಾರು ಸರ್ಕಾರಿ, ಖಾಸಗಿ ಶಾಲೆಗಳಿಗೆ ಸುಸುಜ್ಜಿತವಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಶಾಲಾ ಮಕ್ಕಳಿಗೆ ಶಿಕ್ಷಣಕ್ಕೆ ಅನುಗುಣವಾಗಿ ಪುಸ್ತಕಗಳನ್ನು ವಿತರಿಸಲಾಗಿದೆ.
ಕೇವಲ ಎರಡು ವರ್ಷದ ಅವಧಿಯಲ್ಲಿ ಯಮಕನಮರಡಿ ಕ್ಷೇತ್ರದಲ್ಲಿ ಸುಮಾರು 100 ಸರ್ಕಾರ ಶಾಲೆಗಳು ನಿರ್ಮಿಸಲಾಗಿದೆ. ಅಲ್ಲಿ ಕಲಿಕೆಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಈ ಶಾಲೆಯಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ದೇಶ-ವಿದೇಶದಲ್ಲಿಉನ್ನತ ಸ್ಥಾನದಲ್ಲಿದ್ದಾರೆ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಶಾಲೆಯ ವೈಭವನ್ನು ಕಣ್ಮುಂಬಿಕೊಳ್ಳಬೇಕು. ಮತ್ತೆ ಸಾವಿರಾರೂ ಮಕ್ಕಳಿಗೆ ಬೆಳಕಾಗಬೇಕು. ಕಲಿತ ಶಾಲೆಗೆ ಸ್ವಲ್ಪ ಸಹಾಯ-ಸಹಕಾರ ಮಾಡಿದಾಗ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗುತ್ತವೆ.
ಕಲಿತ ಶಾಲೆಯ ಋಣ ತಿರಿಸುವುದರೊಂದಿಗೆ ಸಮಾಜದ ಸೇವೆಯಲ್ಲಿ ತೊಡಗಿಕೊಳ್ಳಬೇಕು ಅಂದಾಗ ಮಾತ್ರ ಶಿಕ್ಷಣ ಕಲಿಸಿದ ಗುರುಗಳಿಗೂ ಕೀರ್ತಿ ಸಲ್ಲುತ್ತದೆ. ಶಾಲೆಯ ಶತಮಾನ ಪಯಣವು ಶಿಕ್ಷಣದ ಬೆಳಕಿನ ಜೊತೆಗೆ ಸಮಾಜ ನಿರ್ಮಾಣದ ಸಾಕ್ಷಿಯಾಗಿದ್ದು, ಈ ಹೆಮ್ಮೆಯ ಕ್ಷಣದಲ್ಲಿ ಭಾಗಿಯಾಗಿರುವುದು ನನಗೆ ಸಂತೋಷ ತಂದಿದೆ ಎಂದು ಹೇಳಿದರು.
Laxmi News 24×7