Breaking News

RSS ಬ್ಯಾನ್​ ಮಾಡಲು ಇಂದಿರಾ ಗಾಂಧಿ ಕೈಯಲ್ಲೇ ಆಗಿಲ್ಲ: ಆರ್. ಅಶೋಕ್

Spread the love

ಬೆಂಗಳೂರು: “ಆರ್.ಎಸ್ ಎಸ್ ಬ್ಯಾನ್ ಮಾಡಲು ಮೂರು ಬಾರಿ ಪ್ರಯತ್ನ ಮಾಡಿದರು. ಇಂದಿರಾ ಗಾಂಧಿ ಕೈಯಲ್ಲೇ ಆಗಿಲ್ಲ” ಎ‌ಂದು ವಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.

ನಗರದಲ್ಲಿಂದು RSS ಪಥಸಂಚಲನದ ಬಳಿಕ RSS ಬ್ಯಾನ್ ಮಾಡುವ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರವಾಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, “ಆರ್.ಎಸ್ ಎಸ್ ಬ್ಯಾನ್ ಮಾಡಲು ಮೂರು ಬಾರಿ ಪ್ರಯತ್ನ ಮಾಡಿದರೂ ಇಂದಿರಾ ಗಾಂಧಿ ಕೈಯಲ್ಲೇ ಆಗಿಲ್ಲ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಶಾ ಅವರೇ RSS, ದೇಶದ ಬಹುತೇಕ ರಾಜ್ಯಪಾಲರು RSS. ಇಡೀ ದೇಶವೇ RSS ಇದ್ದಾಗ ಕಾಂಗ್ರೆಸ್ ರಾಷ್ಟ್ರೀಯ ಪಾರ್ಟಿ ಆಗಿ ಉಳಿದಿಲ್ಲ. ರಾಹುಲ್ ಗಾಂಧಿ RSS ಬಗ್ಗೆ ಮಾತಾನಾಡುತ್ತಾರೆ ಅಂದರೆ ಅವರಿಗೆ ಭಾರತದ ಇತಿಹಾಸ ಗೊತ್ತಿಲ್ಲ. ಇಂತಹವರಿಗೆ RSS ಬಗ್ಗೆ ಮಾತಾಡುವ ಅರ್ಹತೆ ಇಲ್ಲ. ರಾಷ್ಟ್ರ ಪ್ರೇಮ ಮೂಡಿಸುವ ಸಂಸ್ಥೆ RSS. ಇವರಿಗೆ ರಾಷ್ಟ್ರಪ್ರೇಮ ಇಲ್ಲ, ಕಾಂಗ್ರೆಸ್​ಗೆ ವೋಟಿನ ಪ್ರೇಮ ಮಾತ್ರ ಇದೆ” ಎಂದು ವಾಗ್ದಾಳಿ ನಡೆಸಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ