Breaking News

ಮೈಸೂರಲ್ಲಿ ಕಾರು ಅಡ್ಡಗಟ್ಟಿ ಹಾಡಹಗಲೇ ವ್ಯಕ್ತಿಯ ಭೀಕರ ಕೊಲೆ

Spread the love

ಮೈಸೂರು: ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ನಗರದ ವಸ್ತು ಪ್ರದರ್ಶನ ಆವರಣದ ಮುಂದಿನ ರಸ್ತೆಯಲ್ಲಿ ಇಂದು ಬೆಳಗ್ಗೆ ಸುಮಾರು 11.20 ಗಂಟೆಗೆ ನಡೆದಿದೆ.

ವೆಂಕಟೇಶ್ ಆಲಿಯಾಸ್ ಗಿಲಿಗಿಲಿ ನಾರಾಯಣ (45) ಕೊಲೆಯಾದ ವ್ಯಕ್ತಿ. ಕಾರಿನ ಗ್ಲಾಸ್ ಓಪನ್ ಮಾಡಿಕೊಂಡು ವೆಂಕಟೇಶ್ ತೆರಳುವಾಗ ಆಟೋ ಮತ್ತು ಬೈಕ್​ನಲ್ಲಿ ಬಂದ ಕಿಡಿಗೇಡಿಗಳು, ಕಾರದ ಪುಡಿ ಎರಚಿ ದಾಳಿ ಮಾಡಿದ್ದಾರೆ. ಕೃತ್ಯ ಎಸಗುವಾಗ ನಾಲ್ಕು ಮಂದಿ ಇದ್ದರು ಎಂದು ತಿಳಿದುಬಂದಿದೆ.

ಸ್ಥಳಕ್ಕೆ ನಜರ್​ಬಾದ್​ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಮೃತ ವ್ಯಕ್ತಿಯ ಶವವನ್ನು ಕೆ.ಆರ್.ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ನಜರ್ ಬಾದ್ ಪೊಲೀಸರು ಆಗಮಿಸಿ ಪರಿಶೀಲನೆ ಮಾಡಿ, ಮೃತದೇಹವನ್ನು ಶವಗಾರಕ್ಕೆ ಸಾಗಣೆ ಮಾಡಿದ್ದಾರೆ.

ಸ್ನೇಹಿತ ನಾಗರಾಜು ಹೇಳಿದ್ದೇನು ?: ಮೃತ ವೆಂಕಟೇಶ್ ಸ್ನೇಹಿತ ನಾಗರಾಜು ಕೆ.ಆರ್.ಆಸ್ಪತ್ರೆಯ ಶವಗಾರದ ಬಳಿ ಮಾಧ್ಯಮಗಳ ಜೊತೆ ಮಾತನಾಡಿ, ವೆಂಕಟೇಶ್ ಕಾರಿನಲ್ಲಿ ಹೋಗುವಾಗ ಆತನ ಕಣ್ಣಿಗೆ ಕಾರದ ಪುಡಿ ಎರಚಿ ಆತನನ್ನು ಬರ್ಬರವಾಗಿ ಕೈ ತಲೆ ಹಾಗೂ ಹೊಟ್ಟೆ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ. ಆಟೋ ಹಾಗೂ ಬೈಕಿನಲ್ಲಿ ಬಂದ ನಾಲ್ವರು ಕೊಲೆ ಮಾಡಿದ್ದಾರೆ. ವೆಂಕಟೇಶ್ RMC ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದರು ಎಂದು ಸ್ನೇಹಿತ ನಾಗರಾಜು ತಿಳಿಸಿದ್ದಾರೆ.

ಕೊಲೆಯಾದ ವೆಂಕಟೇಶ್​ಗೆ ಇಬ್ಬರು ಹೆಂಡತಿಯರಿದ್ದರು. ಬೆಳಗ್ಗೆ ಮಾರುಕಟ್ಟೆಗೆ ಕೆಲಸಕ್ಕೆ ಹೋದರೆ ಸಂಜೆ ಮನೆಗೆ ಬರುತ್ತಿದ್ದರು. ಇಂದು ಸಹ ಬೆಳಗ್ಗೆ ನಮಗೆ ಹೇಳಿ ಹೋದರು ಎಂದು ವೆಂಕಟೇಶ ಅವರ ಹೆಂಡತಿ ಹೇಳಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ