Breaking News

ಸಂತ್ರಸ್ತೆ ಬಾಲಕಿಗೆ ಭಾವಪೂರ್ಣ ನಮನ – ನ್ಯಾಯ ಸಾಧನೆಗೆ ಶ್ರಮಿಸಿದ ಪೊಲೀಸರಿಗೆ ಹಾಗೂ ನ್ಯಾಯಾಂಗಕ್ಕೆ ಅಭಿನಂದನೆ.

Spread the love

ಸಂತ್ರಸ್ತೆ ಬಾಲಕಿಗೆ ಭಾವಪೂರ್ಣ ನಮನ – ನ್ಯಾಯ ಸಾಧನೆಗೆ ಶ್ರಮಿಸಿದ ಪೊಲೀಸರಿಗೆ ಹಾಗೂ ನ್ಯಾಯಾಂಗಕ್ಕೆ ಅಭಿನಂದನೆ.

ರಾಯಬಾಗ ತಾಲೂಕಿನಲ್ಲಿ ಬಾಲಕಿಯ ಮೇಲೆ ಕ್ರೌರ್ಯ ಮೆರೆದು ಕೊಲೆ ಮಾಡಿದ ವ್ಯಕ್ತಿಗೆ ನ್ಯಾಯಾಲಯವು ಗಲ್ಲು ಶಿಕ್ಷೆ ಹಾಗೂ 10 ಲಕ್ಷ ರೂ. ದಂಡ ವಿಧಿಸಿರುವ ಸುದ್ದಿ ತಿಳಿದು ಮನಸ್ಸಿಗೆ ಸಮಾಧಾನವಾಯಿತು. ಪ್ರಕರಣದ ತನಿಖಾಧಿಕಾರಿಯಾಗಿದ್ದ ಪಿಎಸ್ಐ ಗಿರಿ ಮಲ್ಲಪ್ಪ ಉಪ್ಪಾರ ಅವರು ಬಾಲಕಿಯ ಮೇಲಾದ ಕ್ರೌರ್ಯತೆಯನ್ನು ನೆನೆದು ಕಣ್ಣೀರು ಹಾಕಿದ ಘಟನೆ ಮನಕಲಕಿತು.

ಪೊಲೀಸರ ಮಾನವೀಯತೆ, ಸರಕಾರಿ ವಕೀಲರ ನಿಷ್ಠೆ ಹಾಗೂ ನ್ಯಾಯಾಧೀಶರ ಕಠಿಣ ತೀರ್ಪಿನಿಂದ ಹತ್ಯೆಗೀಡಾದ ಅಮಾಯಕ ಬಾಲಕಿಯ ಆತ್ಮಕ್ಕೆ ಶಾಂತಿ ಸಿಗಲಿದೆ ಎಂಬ ವಿಶ್ವಾಸವಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾಗಿ, ಪ್ರಕರಣದ ತನಿಖೆಯಲ್ಲಿ ಶ್ರಮಿಸಿದ ಎಲ್ಲರಿಗೂ, ಸಮರ್ಥ ವಾದ ಮಂಡಿಸಿದ ವಕೀಲರಿಗೆ ಹಾಗೂ ನ್ಯಾಯಯುತ ತೀರ್ಪು ನೀಡಿದ ನ್ಯಾಯಾಧೀಶರಿಗೆ ಮನಃಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

 


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ