Breaking News

ಕೌಟುಂಬಿಕ ಕಲಹದಿಂದ ನೊಂದು ಪತ್ನಿ ಎದುರೇ ನದಿಗೆ ಹಾರಿದ ಪತಿ: 3 ದಿನಗಳ ಬಳಿಕ ಶವ ಪತ್ತೆ

Spread the love

ಚಾಮರಾಜನಗರ: ದಾಂಪತ್ಯ ಕಲಹ ವಿಕೋಪಕ್ಕೆ ತಿರುಗಿ ಪತ್ನಿ ಎದುರೇ ಪತಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ದಾಸನಪುರ ಸೇತುವೆಯಲ್ಲಿ ಶುಕ್ರವಾರ ಸಂಜೆ ನಡೆದಿತ್ತು. ಮೂರು ದಿನಗಳ ಶೋಧ ಕಾರ್ಯಾಚರಣೆಯ ಬಳಿಕ ಇಂದು (ಭಾನುವಾರ) ಮೃತದೇಹ ಸಿಕ್ಕಿದೆ.

ಕೊಳ್ಳೇಗಾಲ ತಾಲೂಕಿನ ಕಜ್ಜಿಹುಂಡಿ ಗ್ರಾಮದ ಮಂಜುನಾಥ್(40) ಮೃತಪಟ್ಟವರು. ಬೆಳಕವಾಡಿ ಹೊಸಳ್ಳಿ ಗ್ರಾಮದ ರಾಜೇಶ್ವರಿ ಎಂಬವರ ಜೊತೆ ಕಳೆದ 13 ವರ್ಷಗಳ ಹಿಂದೆ ಮಂಜುನಾಥ್ ಮದುವೆಯಾಗಿತ್ತು. ದಂಪತಿಗೆ 10 ಮತ್ತು 5 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ.

ಕಜ್ಜಿಹುಂಡಿ ಗ್ರಾಮದಿಂದ ಬೈಕ್‌ನಲ್ಲಿ ಬೆಳಕವಾಡಿಗೆ ಪತ್ನಿ ಜೊತೆಗೆ ಮಂಜುನಾಥ್ ತೆರಳುತ್ತಿದ್ದರು. ಆಗ ಸಣ್ಣದಾಗಿ ಆರಂಭಗೊಂಡ ಜಗಳ ಏಕಾಏಕಿ ವಿಕೋಪಕ್ಕೆ ಹೋಗಿದೆ. ನಂತರ ಬೈಕ್ ನಿಲ್ಲಿಸಿ ತಾನು ಸಾಯುತ್ತೇನೆಂದು ಮಂಜುನಾಥ್ ಸೇತುವೆಯಿಂದ ನದಿಗೆ ಹಾರಿದ್ದರು ಎಂದು ಹೇಳಲಾಗಿದೆ.

ಬಳಿಕ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಮೂರು ದಿನ ಶೋಧ ಕಾರ್ಯಾಚರಣೆ ಮಾಡಿದ್ದರು. ಆದರೆ ಮಂಜುನಾಥ್​ ಅವರ ಕುರುಹು ಕೂಡಾ ಪತ್ತೆಯಾಗಿರಲಿಲ್ಲ. ಇಂದು ಕಾವೇರಿ ನದಿಯಲ್ಲಿ ಶವ ಪತ್ತೆಯಾಗಿದೆ. ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಈ‌ ಕುರಿತು ಪ್ರಕರಣ ದಾಖಲಾಗಿದೆ.

ಯುವತಿ ನಾಪತ್ತೆ ಆಗಿದ್ದಕ್ಕೆ ವ್ಯಕ್ತಿಗೆ ಚಾಕು ಇರಿತ: ಅನ್ಯಕೋಮಿನ ಯುವತಿ ಕಾಣೆಯಾಗಿದ್ದ ವಿಷಯದಲ್ಲಿ ಪೊಲೀಸ್ ಠಾಣೆಗೆ ಪ್ರತಿದೂರು ಸಲ್ಲಿಸಲು ಬಂದಿದ್ದ ವ್ಯಕ್ತಿಯೊಬ್ಬರು ಚಾಕುವಿನಿಂದ ಇರಿತಕ್ಕೊಳಗಾದ ಘಟನೆ ಶನಿವಾರ ರಾತ್ರಿ ಗುಂಡ್ಲುಪೇಟೆಯಲ್ಲಿ ನಡೆದಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ