Breaking News

ಶಿರೋಡಾ ಸಮುದ್ರ ಕಡಲ ಕಿನಾರೆಗೆ ತೆರಳಿದ್ದ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನಲ್ಲಿ ಲೋಂಡಾ ಗ್ರಾಮದ ಕುಟುಂಬವೊಂದರ ಎಂಟು ಜನ ನೀರು ಪಾಲ

Spread the love

ಪಕ್ಕದ ಮಹಾರಾಷ್ಟ್ರದ ಶಿರೋಡಾ ಸಮುದ್ರ ಕಡಲ ಕಿನಾರೆಗೆ ತೆರಳಿದ್ದ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನಲ್ಲಿ ಲೋಂಡಾ ಗ್ರಾಮದ ಕುಟುಂಬವೊಂದರ ಎಂಟು ಜನ ನೀರು ಪಾಲಾದ ಘಟನೆ ನಡೆದಿದೆ.

ದಸರಾ ರಜೆಗೆಂದು 8 ಜನರ ತಂಡ ಪ್ರವಾಸಕ್ಕೆ ತೆರಳಿತ್ತು ಎಂಟು ಜನ ಸಮುದ್ರದಲ್ಲಿ ನಾಪತ್ತೆಯಾಗಿದ್ದು ಈಗಾಗಲೇ ಮೂವರು ಶವವಾಗಿ ಪತ್ತೆಯಾಗಿದ್ದರೆ, ಓರ್ವ ಮಹಿಳೆ ಸಾವಿನ ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.

ಫರಿನ್ ಇರ್ಫಾನ್ ಕಿತ್ತೂರ (34), ಇಬಾದ್ ಕಿತ್ತೂರ (13) ಅಳ್ನಾವರ ಮೂಲದ ನಮೀರಾ ಅಕ್ತರ್ (16) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಬಾಕಿ ಉಳಿದವರ ಮೃತ ದೇಹಕ್ಕೆ ಶೋಧ ಕಾರ್ಯ ನಡೆದಿದೆ.

ಲೋಂಡಾದ ಪ್ರಹಾನಾ ಕಿತ್ತೂರ (34) ಎಂಬ ಮಹಿಳೆ ರಕ್ಷಣೆ, ಮಹಾರಾಷ್ಟ್ರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ ಅಗ್ನಿಶಾಮಕ, ಪೊಲೀಸರಿಂದ ಶೋಧಕಾರ್ಯ ಆರಂಭವಾಗಿದೆ.


Spread the love

About Laxminews 24x7

Check Also

ಘಟಿಕೋತ್ಸವದಲ್ಲಿ ವಂದೇ ಮಾತರಂ ಪೂರ್ಣ ಹಾಡು – ವಿಟಿಯು ಕುಲಪತಿ

Spread the loveಬೆಳಗಾವಿ: ರಾಷ್ಟ್ರೀಯ ಗೀತೆಯಾಗಿರುವ ವಂದೇ ಮಾತರಂ ಹಾಡುವ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಈಗಾಗಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ