Breaking News

ನಾನು ಕುಮಾರಸ್ವಾಮಿಗೆ ಉತ್ತರ ಕೊಡುತ್ತೇನೆ:ಡಿಸಿಎಂ

Spread the love

ಬೆಂಗಳೂರು: ನಾನು ಹೆಚ್.ಡಿ. ಕುಮಾರಸ್ವಾಮಿಗೆ ಉತ್ತರ ಕೊಡುತ್ತೇನೆ. ಇದಕ್ಕೆ ಕೊನೆ ಹಾಡಲೇಬೇಕಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ‌. ಶಿವಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಮಾಧ್ಯದಮದವರೊಂದಿಗೆ ಮಾತನಾಡಿದ ಅವರು, ಜೈಲಿಗೆ ಹೋಗುವ ದಿನ ದೂರವಿಲ್ಲ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಪಾಪ ಅವರು ನನ್ನನ್ನು ಜೈಲಿಗೆ ಕಳಿಸೋಕೆ ನೋಡ್ತಿದ್ದಾರೆ. ಅದಕ್ಕಾಗಿ ಅವರು ಏನೇನೋ ಮಾಡ್ತಿರಬಹುದು. ಮೊದಲಿಂದಲೂ ನಮ್ಮ ವಿರುದ್ಧ ಅವರ ಕುಟುಂಬ ಷಡ್ಯಂತ್ರ ಮಾಡ್ತಿದೆ. ಸಿಎಂ ಆಗಿದ್ದಾಗಲೂ ಸಾಕಷ್ಟು ಕೇಸ್ ಹಾಕಿಸಿದ್ದರು. ಜೈಲಿಗೆ ಹೋಗುವ ದಿನ ಹತ್ತಿರ ಬರುತ್ತಿದೆ ಅಂತ ಈಗಲೂ ಅದೇ ಮಾತನ್ನು ಹೇಳುತ್ತಿದ್ದಾರೆ. ಈಗ ಹಬ್ಬ ಇದೆ. ಹಬ್ಬ ಮುಗಿದ ಬಳಿಕ ಮಾತನಾಡುತ್ತೇನೆ. ನಾನು ಪಲಾಯನವಾದಿ ಅಲ್ಲ. ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ಅವರ ಆಸೆ ಏನೇನು ಇದೆಯೋ ಗೊತ್ತಿಲ್ಲ. ಇದಕ್ಕೆ ಕೊನೆ ಹಾಡಲೇಬೇಕು ಎಂದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ