Breaking News

ವಿದ್ಯಾರ್ಥಿಗಳು ಕೃತಜ್ಞತಾ ಮನೋಭಾವನೆ ರೂಡಿಸಿಕೊಳ್ಳಿ. ಪೊಲೀಸ್ ಕಮಿಷನರ್ ಏನ್. ಶಶಿಕುಮಾರ್

Spread the love

ವಿದ್ಯಾರ್ಥಿಗಳು ಕೃತಜ್ಞತಾ ಮನೋಭಾವನೆ ರೂಡಿಸಿಕೊಳ್ಳಿ. ಪೊಲೀಸ್ ಕಮಿಷನರ್ ಏನ್. ಶಶಿಕುಮಾರ್.
ಧಾರವಾಡ- ಸಮಯದ ಕುರಿತು ಅರಿವಿರಲಿ, ಸಮಯವನ್ನು ಗೌರವಿಸಿದರೆ, ಅದು ನಿಮ್ಮನು ಗೌರವಿಸುತ್ತದೆ. ಸಮಯ ನಿರ್ವಹಣೆ ಮಾಡಿ. ಚೆನ್ನಾಗಿ ಓದಿ, ಜೀವನದಲ್ಲಿ ನಿರಂತರ ಪ್ರಯತ್ನ ವಿರಲಿ.
ಕಲಿಸಿದ ಗುರು ಗಳು,ತಂದೆ -ತಾಯಿಗೆ ಕೀರ್ತಿ ತನ್ನಿ. ಜತೆಗೆ ವಿದ್ಯಾರ್ಥಿಗಳು ಕೃತಜ್ಞತಾ ಮನೋಭಾನೆ ಬೆಳಸಿಕೊಳ್ಳಬೇಕು ಎಂದು ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯಕ್ತರಾದ ಎನ್ ಶಶಿಕುಮಾರವರು ತಿಳಿಸಿದರು.
ಧಾರವಾಡದ ಎಸ್ ಜೆ ಎಮ್ ವಿ ಮಹಾಂತ ಪ್ರಥಮ ದರ್ಜೆ ಕಲಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ 2025-26ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಯಶಸ್ಸಿಗೆ ಶಾರ್ಟ್ ಕಟ್ ಬೇಡ. ನಿಶ್ಚಿತ ಗುರಿ ಇರಲಿ.
ಅದರಂತೆ ನಿಮ್ಮ ಪ್ರಯತ್ನ ವಿರಲಿ. ಹಿಂದೆ ಗುರು ಇರಲಿ, ಮುಂದೆ ಗುರಿ ಇರಲಿ. ಶ್ರಮ ಪಟ್ಟು ಓದಿದ್ದರೆ ಯಶಸ್ಸು ನಿಮ್ಮ ಬೆನ್ನು ಹತ್ತುತ್ತದೆ. ಯಶಸ್ಸಿನ ಪಯಣದಲ್ಲಿ ಶ್ರಮವಿರಲಿ. ವ್ಯಕ್ತಿತ್ವ ಪರಿಪೂರ್ಣತೆಯನ್ನು ಬೆಳೆಸಿಕೊಳ್ಳಿ. ಓದಿನ ಜೊತೆಗೆ ಬರವಣಿಗೆ, ಮಾತು, ಸಂವಹನ ಕೌಶಲ್ಯ ಗಳನ್ನು ಬೆಳೆಸಿಕೊಳ್ಳಿ. ಮಹಾವಿದ್ಯಾಲಯದ ಕಾರ್ಯಕ್ರಮ ಗಳಲ್ಲಿ ಬಾಗವಹಿಸಿ.
ವೇದಿಕೆಗಳ ಸದುಪಯೋಗ ಪಡಿಸಿಕೊಳ್ಳಿ. ನಾಯಕತ್ವ ಗುಣ ಬೆಳೆಸಿಕೊಳ್ಳಿ. ಪ್ರಯತ್ನ ನಿಮ್ಮನ್ನು ಯಶಸ್ಸಿನ ಕಡೆ ಕೊಂಡೋಯ್ಯುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರಂತೆ.
ಸಮಗ್ರ ಪರಿಪೂರ್ಣ ವ್ಯಕ್ತಿತ್ವ ನಿಮ್ಮದಾಗಲಿ. ತಮ್ಮಲ್ಲಿ ಕೃತಜ್ಞತಾ ಮನೋಭಾವನೆಯಿರಲಿ. ಓದುವ ಚೀಲ್ ಇರಲಿ. ಜೀವನದಲ್ಲಿ ಯೋಚಿಸಿ ಹೆಜ್ಜೆಯಿಡಿ. ನಿಮ್ಮ ಭವಿಷ್ಯದ ದಿನಗಳಲ್ಲಿ ಯೋಜನೆಯಿರಲಿ. ನಿಮ್ಮಲ್ಲಿ ಆತ್ಮ ವಿಶ್ವಾಸ ವಿರಲಿ. ಭವಿಷ್ಯದ ಪ್ರಜೆಗಳಾಗಿ ದೇಶದ ಕುರಿತು ಚಿಂತಿಸಿ. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ ಎನ್ನುತ್ತಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸದ್ದ ಮಹಾವಿಧ್ಯಾಲಯದ ಪ್ರಾಚಾರ್ಯರಾದ ಡಾ. ರಾಜಶೇಖರಪ್ಪ ಎಮ್. ಅವರು ಮಾತನಾಡಿ, ಸಾಧನೆಗೆ ಕಠಿಣ ಪರಿಶ್ರಮದ ಅವಶ್ಯಕತೆಯಿದೆ. ತಮ್ಮ ಗುರಿ ಹಾಗೂ ಗುರುಗಳ ಮಾರ್ಗದರ್ಶನದಿಂದ ಭವಿಷ್ಯದ ಬದುಕನ್ನು ಕಂಡುಕೊಳ್ಳಿ. ಇಂತಹ ವೇದಿಕೆಗಳ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಳ್ಳಿ. ಸರಳತೆಯನ್ನು ಮೈಗೂಡಿಸಿಕೊಳ್ಳಿ ಎಂದು ಕರೆ ನೀಡಿದರು.‌
ಇನ್ನೂ ವೇದಿಕೆಯಲ್ಲಿ ವಿದ್ಯಾರ್ಥಿ ಒಕ್ಕೂಟದ ಚೇರ್ಮನ್ ರಾದ ಪ್ರೊ. ಎಮ್. ಬಿ. ಅಳಗವಾಡಿ, ಐ ಕ್ಯೂ ಎ ಸಿ ಸಂಯೋಜಕರಾದ ಪ್ರೊ. ಸಿ. ಕೆ ಹುಬ್ಬಳ್ಳಿ, ಡಾ. ಪುಷ್ಪಾ ಬಸನಗೌಡರ, ಪ್ರೊ. ಕೆ. ಎಸ್. ಮೇಲಮಾಳಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ