Breaking News

ಹುಕ್ಕೇರಿಯಲ್ಲಿ ಅಭಿವೃದ್ಧಿಯ ಹಬ್ಬ – 25 ಕೋಟಿ ರೂ. ಅನುದಾನ ಬಿಡುಗಡೆ

Spread the love

ಹುಕ್ಕೇರಿಯಲ್ಲಿ ಅಭಿವೃದ್ಧಿಯ ಹಬ್ಬ – 25 ಕೋಟಿ ರೂ. ಅನುದಾನ ಬಿಡುಗಡೆ
ಹುಕ್ಕೇರಿ ತಾಲೂಕಿನಲ್ಲಿ ಅಂದಾಜು ರೂ. 25 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರಾದ ಅನುದಾನದ ಆದೇಶ ಪತ್ರಗಳನ್ನು ಇಂದು ಹುಕ್ಕೇರಿ ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಸಮುದಾಯಗಳ ಮುಖಂಡರಿಗೆ ವಿತರಿಸಲಾಯಿತು.
ಸಾರಾಪೂರ ಗ್ರಾಮದ ಶಾಂತಿನಾಥ ದಿಗಂಬರ್ ಜೈನ ಮಂದಿರಕ್ಕೆ ಸಮುದಾಯ ಭವನ ನಿರ್ಮಾಣಕ್ಕಾಗಿ ರೂ. 50 ಲಕ್ಷ, ಬೆಲ್ಲದ ಬಾಗೇವಾಡಿಯ ಆದಿನಾಥ ಭಸ್ತಿ ದೇವಾಲಯ ಸಮಿತಿಗೆ ರೂ. 40 ಲಕ್ಷ ಅನುದಾನ ಮಂಜೂರಾಗಿದೆ. ಜೈನ್ ಸಮುದಾಯದ ಬೇಡಿಕೆಯಂತೆ ಇನ್ನೂ ಅನೇಕ ಗ್ರಾಮಗಳಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ ಮಂಜೂರು ‌ಮಾಡಲಾಗುವುದು.
ಇದೇ ರೀತಿ ಹುಕ್ಕೇರಿ ತಾಲೂಕಿನ 23 ಗ್ರಾಮಗಳಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಹೈಮಾಸ್ಟ್ ದೀಪಗಳ ಅಳವಡಿಕೆ ನಡೆಯಲಿದೆ. ಹರಗಾಪುರ, ಹಡಲಗಾ, ಕೆ.ಎಸ್. ನಾಗನೂರು, ಶಿರಪೂರ ಗ್ರಾಮಗಳಲ್ಲಿ ವಾಲ್ಮೀಕಿ ಭವನ ನಿರ್ಮಿಸಲು ತಲಾ 20 ಲಕ್ಷ ರೂ., ಹಾಗೂ 17 ಗ್ರಾಮಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಮ್ ಭವನಗಳ ನಿರ್ಮಾಣಕ್ಕೆ ತಲಾ 20 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ.
ಅಷ್ಟೇ ಅಲ್ಲದೆ, ಅಲ್ಪಸಂಖ್ಯಾತ ಕಾಲೋನಿಗಳಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೂ ಅನುದಾನ ಮಂಜೂರಾಗಿದೆ.
ಈ‌ ಸಂದರ್ಭದಲ್ಲಿ ವಿವಿಧ ಮುಖಂಡರು ‌ನನ್ನನ್ನು ಸನ್ಮಾನಿಸಿ, ಕೃತಜ್ಞತೆ ‌ಸಲ್ಲಿಸಿದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ