ಗದಗ : ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಬೇಡಜಂಗಮರ ಸಮಾವೇಶವು ಸಂಪೂರ್ಣ ವಿಫಲವಾಗಿದೆ ಎಂದು ಗದಗದ ಹರಿಹರ ಪೀಠದ ಜಗದ್ಗುರು ವಚನಾನಂದ ಶ್ರೀಗಳು ತೀಕ್ಷ್ಣವಾಗಿ ಟೀಕಿಸಿದ್ದಾರೆ. ಈ ಸಮಾವೇಶಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ಶ್ರೀಗಳು, ಇದರಲ್ಲಿ ಭಾಗವಹಿಸಿದ್ದು ಕೇವಲ 7,000 ಜನರಷ್ಟೇ, ವ್ಯಾಪಕ ಪ್ರಚಾರ ಮತ್ತು ಖರ್ಚಿನ ಹೊರತಾಗಿಯೂ ಜನಸ್ಪಂದನೆ ಸಿಕ್ಕಿಲ್ಲ ಎಂದು ಕಿಚಾಯಿಸಿದ್ದಾರೆ.
ನಗರದಲ್ಲಿಂದು ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೇದಿಕೆಯ ಮೇಲೆ ಕೆಲವು ಸ್ವಾಮೀಜಿಗಳನ್ನು ಬಿಟ್ಟರೆ, ಉಳಿದವರೆಲ್ಲಾ ಸ್ಥಳೀಯ ಪುರೋಹಿತರು ಮಾತ್ರ ಇದ್ದರು. ಸಮಾವೇಶದಲ್ಲಿ ಯಾವುದೇ ಸ್ಪಷ್ಟತೆ ಇರಲಿಲ್ಲ. ಏನು ಸಂದೇಶ ನೀಡಲು ಬಂದಿದ್ದರು ಎಂಬುದು ಸಹ ಗೊತ್ತಾಗಲಿಲ್ಲ ಎಂದರು.
Laxmi News 24×7