Breaking News

ಬೆಳಗಾವಿಯ ರಾಜಾ ಮಂಟಪಕ್ಕೆ ಕಮಿಷ್ನರ್ ಬೋರಸೆ ಭೇಟಿ… ಶಾಂತಿ – ಸುರಕ್ಷತೆ ಕಾಪಾಡಲೂ ಮಂಡಳಕ್ಕೆ ಸಲಹೆ

Spread the love

ಬೆಳಗಾವಿಯ ರಾಜಾ ಮಂಟಪಕ್ಕೆ ಕಮಿಷ್ನರ್ ಬೋರಸೆ ಭೇಟಿ…
ಶಾಂತಿ – ಸುರಕ್ಷತೆ ಕಾಪಾಡಲೂ ಮಂಡಳಕ್ಕೆ ಸಲಹೆ
ಬೆಳಗಾವಿಯ ರಾಜಾ ಮಂಟಪಕ್ಕೆ ಕಮಿಷ್ನರ್ ಬೋರಸೆ ಭೇಟಿ…
ಪೂರ್ವ ಸಿದ್ಧತೆಗಳ ಪರಿಶೀಲನೆ
ಶಾಂತಿ – ಸುರಕ್ಷತೆ ಕಾಪಾಡಲೂ ಮಂಡಳಕ್ಕೆ ಸಲಹೆ
ಇಲಾಖೆ ಸೂಚನೆ ಪಾಲಿಸುವ ಭರವಸೆ ನೀಡಿದ ಮಂಡಳ
ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೋರ್ಸೆ ಅವರು ನಗರದ ಚವಾಟ್ ಗಲ್ಲಿಯಲ್ಲಿರುವ ‘ಬೆಳಗಾವಿಯ ರಾಜಾ’ ಗಣೇಶೋತ್ಸವ ಮಂಡಪಕ್ಕೆ ಭೇಟಿ ನೀಡಿ, ಸಿದ್ಧತೆಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ, ಅವರು ಉತ್ಸವದ ಯಶಸ್ಸು ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಮಂಡಳಿಯ ಸದಸ್ಯರೊಂದಿಗೆ ವಿವರವಾಗಿ ಚರ್ಚಿಸಿದರು.
ಸಂದರ್ಭದಲ್ಲಿ ಮಾತನಾಡಿದ ಕಮಿಷನರ್, “ಬೆಳಗಾವಿ ಜಿಲ್ಲೆಯಾದ್ಯಂತ ಗಣೇಶೋತ್ಸವವನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಆದರೆ, ಎಲ್ಲರೂ ಕಾನೂನು ನಿಯಮಗಳನ್ನು ಪಾಲಿಸುವ ಜವಾಬ್ದಾರಿ ಇದೆ. ಉತ್ಸವವನ್ನು ಸಂಯಮ ಮತ್ತು ಶಿಸ್ತಿನಿಂದ ಆಚರಿಸುವುದು ಅತಿ ಮುಖ್ಯ” ಎಂದು ಹೇಳಿದರು.
“ಗಣೇಶೋತ್ಸವವು ಬೆಳಗಾವಿಯ ಒಂದು ಪ್ರಮುಖ ಹಬ್ಬವಾಗಿದ್ದು, ಸಾವಿರಾರು ಭಕ್ತರು ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಿಂದ ಬಂದು ವಿವಿಧ ಗಣೇಶ ಮಂಟಪಗಳಿಗೆ ಭೇಟಿ ನೀಡುತ್ತಾರೆ.
ಹೀಗಾಗಿ, ಸಾರ್ವಜನಿಕರ ಸುರಕ್ಷತೆ ಮತ್ತು ಶಾಂತಿಯುತ ವಾತಾವರಣವನ್ನು ಕಾಪಾಡುವುದು ಪೊಲೀಸ್ ಇಲಾಖೆಯ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.
ಈ ಭೇಟಿಯ ಸಂದರ್ಭದಲ್ಲಿ ಮಾತನಾಡಿದ ‘ಬೆಳಗಾವಿಯ ರಾಜಾ’ ಗಣೇಶೋತ್ಸವ ಮಂಡಳಿಯ ಕಾರ್ಯಾಧ್ಯಕ್ಷ ಸುನಿಲ್ ಜಾಧವ್, “ನಾವು ಕರ್ನಾಟಕ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತೇವೆ. ಪೊಲೀಸ್ ಇಲಾಖೆಯಿಂದ ನೀಡಲಾಗುವ ಸೂಚನೆಗಳನ್ನು ನಿಷ್ಠೆಯಿಂದ ಪಾಲಿಸುತ್ತೇವೆ. ನಮ್ಮ ಮಂಡಳದ ವತಿಯಿಂದ ಯಾವುದೇ ರೀತಿಯ ಕಾನೂನು ಅಥವಾ ಶಿಸ್ತಿನ ಉಲ್ಲಂಘನೆ ಆಗದಂತೆ ನಾವು ಕ್ರಮ ಕೈಗೊಳ್ಳುತ್ತೇವೆ” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರತಾಪ್ ಮೋಹಿತೆ, ಉತ್ತಮ ನಾಕಾಡಿ, ಮಂಡಳಿಯ ಅಧ್ಯಕ್ಷ ಶ್ರೀನಾಥ್ ಪವಾರ್, ಕಾರ್ಯಾಧ್ಯಕ್ಷ ಸುನಿಲ್ ಜಾಧವ್, ವಿನಾಯಕ್ ಪವಾರ್, ಅಭಿಷೇಕ್ ನಾಯಕ್, ಸತ್ಯಮ್ ನಾಯಕ್, ವೃಷಭ ಮೋಹಿತೆ, ಭರತ್ ಕಾಲಗೆ, ಶಿವಜಯಂತಿ ಉತ್ಸವ ಮಂಡಳದ ಅಧ್ಯಕ್ಷ ಅನಂತ್ ಬಾಮಣೆ, ಪ್ರಧಾನ ಕಾರ್ಯದರ್ಶಿ ರೋಹನ್ ಜಾಧವ್, ಸೌರಭ್ ಪವಾರ್, ಹರ್ಷಲ್ ನಾಯಕ್, ಮಹೀಂದ್ರ ಪವಾರ್, ನಿಖಿಲ್ ಪಾಟೀಲ್, ಸಂಜಯ್ ರೆಡೇಕರ್, ವಿಶಾಲ್ ಮುಚ್ಚಂಡಿ, ಉಮೇಶ್ ಮೆಣಸೆ ಹಾಗೂ ಇತರ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ