ಗಾಂಧಿ ಜಯಂತಿ ದಿನ ಜಿಲ್ಲೆ ವಿಭಜಿಸಿ:ಸಂಪದನಾ ಸ್ವಾಮೀಜಿ
ಚಿಕ್ಕೋಡಿ: ಬರುವ ಅ.2ರಂದು ಗಾಂಧಿಜಿ ಜಯಂತಿಯಂದು ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಚರಮೂರ್ತಿ ಮಠದ ಸಂಪಾದನಾ ಸ್ವಾಮಿಜಿ ಹೇಳಿದರು.
ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಕಳೆದ 30 ವರ್ಷಗಳಿಂದ ಅಹಿಂಸೆಯಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಸರಕಾರಗಳು ನಮ್ಮ ಹೋರಾಟಕ್ಕೆ ಸ್ಪಂದನೆ ಮಾಡುತ್ತಿಲ್ಲ. ಗಾಂಧಿ ಜಯಂತಿಯಂದು ಜಿಲ್ಲೆ ಘೋಷಣೆ ಮಾಡದೇ ಹೋದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಮತ್ತೇ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಎಚರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಚಿಕ್ಕೋಡಿ ಜಿಲ್ಲೆ ಬಗ್ಗೆ ಸರಕಾರದ ಗಮನಕ್ಕೆ ತಂದು ಕೂಡಲೇ ಘೋಷಣೆ ಮಾಡಬೇಕು. ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡುವಂತೆ ಸಚಿವರಿಗೆ ಇನ್ನೊಂದು ಭಾರಿ ಎಲ್ಲಾ ಜನಪ್ರತಿನಿಧಿಗಳು ಹಾಗೂ ಮನವಿ ಸಲ್ಲಿಸಲಾಗುವುದು.
ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯಿಂದ ಮತ್ತೆ ಹೋರಾಟ ತೀವ್ರಗೊಳಿಸಲಾಗುವದು ಎಂದು ತಿಳಿಸಿದರು.
ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಸಂಜು ಬಡಿಗೇರ, ಕಾರ್ಯದರ್ಶಿ ಚಂದ್ರಕಾಂತ ಹುಕ್ಕೇರಿ, ಉಪಾಧ್ಯಕ್ಷ ಶ್ರೀಕಾಂತ ಅಸೋದೆ, ಅಪ್ಪಾಸಾಹೇಬ ಕುರಣೆ, ಚಂದ್ರಶೇಖರ ಅರಭಾವಿ, ಅನೀಲ ನಾವಿ, ಅಪ್ಪಾಸಾಹೇಬ ಹಿರೇಕೋಡಿ, ಪ್ರತಾಪ ಪಾಟೀಲ, ಮಂಜು ಪರಗೌಡರ, ಖಾನಪ್ಪಾ ಬಾಡಕರ, ದುಂಡಪ್ಪಾ ಚೌಗಲಾ, ರುದ್ರಯ್ಯಾ ಹಿರೇಮಠ, ಮೋಹನ ಪಾಟೀಲ, ಶಿವು ಮದಾಳೆ, ಸಚಿನ ದೊಡ್ಡಮನಿ, ಮಾಳು ಕರೆಣ್ಣವರ, ರಫಿಕ್ ಪಠಾಣ, ಶಿವಾಜಿ ಖಾಡೆ, ಸಂತೋಷ ಕುರಣೆ, ಸಿದ್ದರಾಮ ಕರಗಾವೆ, ಸುರೇಶ ಖದ್ದಿ ಇತರರು ಇದ್ದರು.
Laxmi News 24×7