ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಚಿಕ್ಕೋಡಿ: 2019ರಲ್ಲಿ ಕೃಷ್ಣಾ ನದಿಯಿಂದ ಭೀಕರ ಪ್ರವಾಹ ಬಂದ ಸಂದರ್ಭದಲ್ಲಿ ಜನರ ಜೀವನಾಡಿಯಾಗಿದ್ದ ಕಾಡಾಪೂರದ ಗ್ರಾಮದ ರಸ್ತೆಯ ಅಗಲೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕೆಂಬ ಬೇಡಿಕೆ ಗ್ರಾಮಸ್ಥರದಾಗಿತ್ತು.
ಹೀಗಾಗಿ 1.65 ಕೋಟಿ ರೂ. ಮೊತ್ತದಲ್ಲಿ ರಸ್ತೆ, ಬೀದಿದೀಪ, ಚರಂಡಿ ಮುಂತಾದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹೇಳಿದರು.
ಚಿಕ್ಕೋಡಿ ತಾಲೂಕಿನ ಕಾಡಾಪೂರ ಗ್ರಾಮದಲ್ಲಿ 1.65 ಕೋಟಿ ರೂ. ಮೊತ್ತದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡುತ್ತಾ, ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸುವ ಮೂಲಕ ಗುಣಮಟ್ಟದ ಆದ್ಯತೆ ಕಾಮಗಾರಿಗೆ ನೀಡಲಾಗುತ್ತಿದೆ.
ಗ್ರಾಮ ಪಂಚಾಯಿತಿ ಕಚೇರಿಯಿಂದ ಹೊಸ ಬಸ್ ನಿಲ್ದಾಣದವರೆಗೆ ಸಂಪರ್ಕ ಸುಗಮಗೊಳ್ಳುವುದು ಮಾತ್ರವಲ್ಲ. ಮಳೆಗಾಲದಲ್ಲಿ ಎದುರಾಗುತ್ತಿದ್ದ ಸಂಚಾರ ತೊಂದರೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದರು.
ಮುಖಂಡ ಪ್ರಕಾಶ ರಾಚಣ್ಣವರ ಮಾತನಾಡಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಧೃಢ ಸಂಕಲ್ಪದಿಂದ ಕಾಡಾಪೂರ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಇಂತಹ ಕಾಮಗಾರಿಗಳಿಂದ ಗ್ರಾಮಕ್ಕೆ ಹೊಸ ರೂಪ ಸಿಗಲಿದೆ ಎಂದು ಹೆಮ್ಮೆಪಟ್ಟರು.
ಈ ಸಂದರ್ಭದಲ್ಲಿ ಅಪ್ಪು ಸನದಿ, ಸಂಭಾಜಿ ಪವಾರ, ಶಿವಾಜಿ ಸಿಂಧೆ, ರವಿ ತುಬಾಕೆ, ಭರತ ಕೋಳೇಕರ, ನಂದು ಕೋಳೇಕರ, ಅಶೋಕ ತುಬಾಕೆ, ದಾಸು ಪಾಂಡರೆ, ಕುಮಾರ ವಾಘಮೋರೆ, ಮಚ್ಚೇಂದ್ರ ಕಾಡಾಪೂರೆ ಮುಂತಾದವರು ಇದ್ದರು.
Laxmi News 24×7